ಪುಷ್ಪ ಪ್ರಸಾದ್ ಉಡುಪಿ ಇವರಿಗೆ “ಮಹಿಳಾ ಐಕಾನ್ ಪ್ರಶಸ್ತಿ 2025” ಎಂಬ ಪ್ರತಿಷ್ಠಿತ ಆನ್‌ಲೈನ್ ಪ್ರಶಸ್ತಿ

0
208

ಅಂತರಾಷ್ಟ್ರೀಯ ಮಹಿಳಾ ದಿನದ ವಿಶೇಷ ಸಂದರ್ಭದಲ್ಲಿ “ಮಹಿಳಾ ಐಕಾನ್ ಪ್ರಶಸ್ತಿ 2025” ಎಂಬ ಪ್ರತಿಷ್ಠಿತ ಆನ್‌ಲೈನ್ ಪ್ರಶಸ್ತಿ ಕಾರ್ಯಕ್ರಮವನ್ನು ವುಮೆನ್ ವರ್ಲ್ಡ್ ರೆಕಾರ್ಡ್ಸ್ ಆಯೋಜಿಸಿ, ಈ ಕಾರ್ಯಕ್ರಮವು ವೈವಿಧ್ಯಮಯ ಕ್ಷೇತ್ರಗಳಲ್ಲಿ ಮಹಿಳೆಯರ ಗಮನಾರ್ಹ ಕೊಡುಗೆಗಳನ್ನು ಗುರುತಿಸುವ ಮತ್ತು ಆಚರಿಸುವ ಗುರಿಯನ್ನು ಪರಿಗಣಿಸಿ, ಬರವಣಿಗೆ ಕ್ಷೇತ್ರದಲ್ಲಿನ ಶ್ಲಾಘನೀಯ ಕೆಲಸಕ್ಕಾಗಿ ಪ್ರಶಸ್ತಿ ಪುರಸ್ಕೃತರಾಗಿ ಆಯ್ಕೆಯಾದ ಕರ್ನಾಟಕದ ಉಡುಪಿಯ ಪುಷ್ಪಾ ಪ್ರಸಾದ್ ಅವರಿಗೆ ಪ್ರದಾನ ಮಾಡಲಾಯಿತು.

ಇವರ ಸಾಹಿತ್ಯ ಸಮರ್ಪಣೆ, ಸೃಜನಶೀಲತೆ ಮತ್ತು ಇವರ ಎಲ್ಲಾ ಬರಹಕ್ಕೆ ಸಂಬಂಧಪಟ್ಟ ಪದಗಳ ಹಾಗೂ ಸಾಲುಗಳನ್ನು ಪರಿಗಣಿಸಿ, ಇವರಿಗೆ ಸಿಕ್ಕ ಹಲವಾರು ಪ್ರಶಸ್ತಿಗಳನ್ನು, ಪ್ರಶಂಸೆಗಳನ್ನು, ಪ್ರತಿಭಾ ಕೌಶಲ್ಯವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ.

LEAVE A REPLY

Please enter your comment!
Please enter your name here