ಮಂಗಳೂರು: 18ನೇ ವಾರ್ಷಿಕ ಕಥಾಬಿಂದು ಸಾಹಿತ್ಯೋತ್ಸವದಲ್ಲಿ ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ, ಕಥಾಬಿಂದು ಪ್ರಕಾಶನ ಮಂಗಳೂರು ವತಿಯಿಂದ ದಿನಾಂಕ 26-10-2025 ರಂದು ಪುಷ್ಪ ಪ್ರಸಾದ್ ರವರ ಏಳನೇ ಕೃತಿ “ಗುಡಿಗಾರ” ಮಂಗಳೂರು ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ರವೀಂದ್ರ ಕಲಾ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.
ಈ ಪುಸ್ತಕಕ್ಕೆ ಚೇoಪಿ ದಿನೇಶ್ ಆಚಾರ್ಯ ಇವರು ಮುನ್ನುಡಿಯನ್ನು ಬರೆದಿರುತ್ತಾರೆ. ಶ್ರೀ ದೇವಿಪ್ರಸಾದ್ ಗುಡಿಗಾರ್ ಬೆನ್ನುಡಿಯನ್ನು ಬರೆದಿರುತ್ತಾರೆ ಹಾಗೂ ಸರಸ್ವತಿ ಕೋಟೇಶ್ವರ ಮತ್ತು ಆನಂದ್ ಜೆ. ಎನ್. ದಾಂಡೇಲಿ ಇವರು ಶುಭಾಶಯ ನುಡಿಗಳನ್ನು ಬರೆದಿರುತ್ತಾರೆ. ಇವರು ಈಗಾಗಲೇ ಒಸಗೆಯ ಎಸಳು, ಭಾವ ನೈವೇದ್ಯ, ಹೆಜ್ಜೆ ತಾಳದ ಗೆಜ್ಜೆ ಘಲಿರು, ನಕ್ಷತ್ರ ಪುಂಜ, ಪುಟಾಣಿ ಸ್ವರ್ಗ, ಸೃಷ್ಟಿಯ ತೋರಣ ಕೃತಿಗಳನ್ನು ಹೊರ ತಂದಿರುತ್ತಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಅನೇಕ ಸಂಘ ಸಂಸ್ಥೆಗಳಿಂದ ರಾಷ್ಟ್ರ, ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೆರಿಸಿಕೊಂಡಿದ್ದಾರೆ. ಇವರು ದೇವಿಪ್ರಸಾದ್ ಉಡುಪಿ ಇವರ ಪತ್ನಿಯಾಗಿರುತ್ತಾರೆ ಹಾಗೂ ಪ್ರತಿಲಿಪಿ ಕನ್ನಡದ ಸಕ್ರಿಯ ಸಾಹಿತಿಯಾಗಿರುತ್ತಾರೆ.

