ವರದಿ ರಾಯಿ ರಾಜ ಕುಮಾರ
ಪುತ್ತಿಗೆ ಸಾರ್ವಜನಿಕ ಶಾರದ ಪೂಜಾ ಮಹೋತ್ಸವ ಸಮಿತಿ ಇದರ 17ನೇ ವರುಷದ ಪೂಜಾ ಮಹೋತ್ಸವವು ಪುತ್ತಿಗೆ ಮಹಾತೋಭರ ಶ್ರೀ ಸೋಮನಾಥೆಶ್ವರ ದೇವಳದಲ್ಲಿ ಅಕ್ಟೋಬರ್ 20ರಂದು ನಡೆಯಿತು.ವೇದಮೂರ್ತಿ ಅಡಿಗಲ್ ಅನಂತಕೃಷ್ಣ ಭಟ್ ಹಾಗೂ ಕುಂಗೂರು ಚಾವಡಿಮನೆ ಶಿವಪ್ರಸಾದ್ ಆಚಾರ್ ಇವರ ಪೌರೋಹಿತ್ಯದಲ್ಲಿ ಶಾರದಾ ಮಾತೆಯ ಪ್ರತಿಷ್ಠೆ ಬೆಳಗ್ಗೆ , ಮಧ್ಯಾಹ್ನ ಮಹಾಪೂಜೆ ನಡೆಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಗೌರವ ಅಧ್ಯಕ್ಷ ಚೌಟರ ಅರಮನೆಯ ಕುಲದೀಪ್ ಎಂ,ಸಮಿತಿಯ ಗೌರವ ಸಲಹೆಗಾರರು ಮಹಾ ಪೋಷಕರು ಪುತ್ತಿಗೆ ಗುತ್ತು ಕೊಲಕಾಡಿ ನಿಲೇಶ್ ಶೆಟ್ಟಿ, ಮಯೂರಿ ರಾಜೇಂದ್ರ ಕುಮಾರ್ ಸಮಿತಿಯ ಅಧ್ಯಕ್ಷರಾದ ರಂಗನಾಥ್ ಭಟ್ ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಸದಸ್ಯರಾದ ನಾಗವರ್ಮ ಜೈನ್ ,ಚಂದ್ರಶೇಖರ್ ನಾಯ್ಕ್ ,ಗಣೇಶ ಗೌಡ, ಸುನೀಲ್ ಕುಮಾರ್, ಸಂದೇಶ್ ಕುಮಾರ್ ,ರವಿಶಂಕರ್ ಕಾರಂತ್, ದಯಾನಂದ ದೇವಾಡಿಗ, ಪ್ರಕಾಶ್ ಶೆಟ್ಟಿ, ರತ್ನಾಕರ್ ನಾಯ್ಕ್ ,ಸುಧೀಶ್ ಶೆಟ್ಟಿ, ರಾಜಶೇಖರ್ ರಾವ್ ಉಪಸ್ಥಿತರಿದ್ದರು.
ಸಂಜೆ ವಿಸರ್ಜನಾ ಪೂಜೆಯ ತರುವಾಯ ವಿಜೃಂಭಣೆಯಲ್ಲಿ ಜಲಸ್ತಂಭನಾ ಕಾರ್ಯ ಸಂಪನ್ನಗೊಂಡಿತು.
.

