ಪುತ್ತೂರು: ನ.16ರಂದು ಗದ್ದೆಕೋರಿ ಉತ್ಸವ: ನ.19 ರಂದು ಲಕ್ಷದೀಪೋತ್ಸವ

0
74

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ದಿನಾಂಕ : 16-11-2025ನೇ ಆದಿತ್ಯವಾರ ಸಾಯಂಕಾಲ 6-00 ಗಂಟೆಗೆ ಬಲಿ ಹೊರಟು ಗದ್ದೆಕೋರಿ ಉತ್ಸವ (ಪೂಕರೆ) ಹಾಗೂ 19-11-2025ನೇ ಬುಧವಾರ ಕಾರ್ತಿಕ ಮಾಸದ ಅಮಾವಾಸ್ಯೆ ದಿನ ಸಂಪ್ರದಾಯ ಪ್ರಕಾರ ಲಕ್ಷದೀಪೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ಲಕ್ಷದೀಪೋತ್ಸವ ದಿನ ನಡೆಯುವ ಕಾರ್ಯಕ್ರಮಗಳ ವಿವರ : ಸಂಜೆ ಗಂಟೆ 7-30ಕ್ಕೆ ಪೂಜೆ ಬಳಿಕ ದೇವರ ಬಲಿ ಹೊರಟು ಒಳಾಂಗಣ ಹಾಗೂ ಹೊರಾಂಗಣದಲ್ಲಿ ಉತ್ಸವ ನಡೆದು, ಕಟ್ಟೆಪೂಜೆ, ಚಂದ್ರಮಂಡಲ ಉತ್ಸವ ಹಾಗೂ ಕೆರೆ ಉತ್ಸವ ಜರಗಲಿರುವುದು.

LEAVE A REPLY

Please enter your comment!
Please enter your name here