ದೇವಸ್ಥಾನದ ಬ್ರಹ್ಮ ಕಲಶೋತ್ಸವಕ್ಕೆ ಹಣದ ಬದಲು ಭಕ್ತರಿಂದ ಕೇವಲ 2ತೆಂಗಿನ ಕಾಯಿ ಸಮರ್ಪಣೆಗೆ ಆಡಳಿತ ಮಂಡಳಿ ತೀರ್ಮಾನ!
ಪುತ್ತೂರು:ದೇಶದ ಬಹುತೇಕ ದೈವಸ್ಥಾನ ಹಾಗೂ ದೇವಸ್ಥಾನಗಳಲ್ಲಿ ಕನಿಷ್ಠ ಒಂದು ಸಾಮಾನ್ಯ ಕಟ್ಟೆ ಕಟ್ಟುವುದರಿಂದ ಹಿಡಿದು ಯಾವುದೇ ಪೂಜಾದಿ ವಿಧಿ ವಿಧಾನ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಭಕ್ತಾದಿಗಳಿಂದ ನಗದು ಅಥವಾ ವಸ್ತುರೂಪದ ವಂತಿಗೆ, ದೇಣಿಗೆಗಳನ್ನು ಪಡೆದೇ ಯಾವುದೇ ಕಾರ್ಯಕ್ರಮಗಳನ್ನು ನಡೆಸುವುದು ವಾಡಿಕೆಯಾ ಗಿರುತ್ತದೆ.
ಅದರಲ್ಲೂ ಮುಖ್ಯವಾಗಿ ಬ್ರಹ್ಮಕಲಥೋತ್ಸವದಂತಹಾ ಭಾರಿ ಖರ್ಚಿನ ಧಾರ್ಮಿಕ ಕಾರ್ಯಕ್ರಮಗಳಿಗಂತೂ ಸಾಮಾನ್ಯವಾಗಿ ಊರಿನ ಪ್ರತಿ ಮನೆಯವರೂ ಸಹ ಇಂತಿಷ್ಟೇ ಹಣ ಅಥವಾ ವಂತಿಗೆ, ದೇಣಿಗೆಗಳನ್ನು ಕೊಡಲೇಬೇಕೆಂಬ ನಿಯಮಗಳನ್ನು ಆಯಾ ಊರಿಗೆ ಸಂಬಂಧಿಸಿದ ದೈವಸ್ಥಾನ ಹಾಗೂ ದೇವಸ್ಥಾನಗಳ ಆಡಳಿತ ಮಂಡಳಿಗಳು ಕಡ್ಡಾಯಗೊಳಿಸುವುದು ಕೂಡ ಮಾಮೂಲಿಯಾಗಿ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.
. ಆದರೆ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ನಡೆಯುವ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಊರವರಿಂದಾಗಲೀ ಅಥವಾ ಯಾವುದೇ ದಾನಿಗಳಿಂದಾಗಲೀ ಕಡ್ಡಾಯವಾಗಿ ಇಂತಿಷ್ಟೇ ವ೦ತಿ ಗೆ ,ದೇಣಿಗೆಗಳನ್ನು ಕೊಡಲೇಬೇಕೆಂದು ಒತ್ತಾಯಪಡಿಸದೆ ಯಾವುದೇ ಭಕ್ತರು ಅಥವಾ ದಾನಿಗಳು ಬ್ರಹ್ಮ ಕಲಶೋತ್ಸವಕ್ಕೆ ಕೇವಲ ಎರಡು ತೆಂಗಿನ ಕಾಯಿಗಳನ್ನು ಮಾತ್ರ ಕೊಟ್ಟರೆ ಸಾಕೆಂದು ತೀರ್ಮಾನ ಕೈಗೊಳ್ಳುವ ಮೂಲಕ ಪುತ್ತೂರಿನ ಈಶ್ವರಮಂಗಲದ ಹನುಮಗಿರಿ ದೇವಸ್ಥಾನ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಇಡೀ ದೇಶದ ದೇವಸ್ಥಾನಗಳ ಇತಿಹಾಸದಲ್ಲೇ ಮಾದರಿ ಹೆಜ್ಜೆಯನ್ನುಡುವ ಮೂಲಕ ದೇಶದ ಎಲ್ಲಾ ದೈವ ಸ್ಥಾನ ಹಾಗೂ ದೇವಸ್ಥಾನಗಳಿಗೂ ಆದರ್ಶಪ್ರಾಯವಾಗಿ ನಾಡಿನಾದ್ಯಂತ ಅಚ್ಚರಿ ಮತ್ತು ಶ್ಲಾಘನೆಗೆ ಪಾತ್ರವಾಗಿದೆ.
ಇದೇ ಬರುವ ಏಪ್ರಿಲ್ 9 ರಿಂದ ಏಪ್ರಿಲ್ 12ರ ವರೆಗೆ ಈಶ್ವರ ಮಂಗಲದ ಶ್ರೀ ಹನುಮಗಿರಿ ಕ್ಷೇತ್ರದಲ್ಲಿ ಅದ್ದೂರಿ ಬ್ರಹ್ಮ ಕಲಶೋತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಆದರೆ ಊರಿನ ಬಡವರಿಂದ ಹಿಡಿದು ಯಾರೊಬ್ಬ ಭಕ್ತಾದಿಗಳಿಗೂ ತೊಂದರೆ ಮತ್ತು ಹೊರೆಯಾಗಬಾರದೆಂಬ ಕಾರಣಕ್ಕೆ ಯಾರಿಂದಲೂ ಕಡ್ಡಾಯ ವಂತಿಗೆ, ದೇಣಿಗೆಗಳನ್ನು ಪಡೆದುಕೊಳ್ಳದಿರಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಆಡಳಿತ ಮಂಡಳಿಯೇ ಬ್ರಹ್ಮಕಲಶೋತ್ಸವದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಮುಂದಾಗಿದ್ದು ದೇವಸ್ಥಾನದ ಆಡಳಿತ ಮಂಡಳಿಯ ಈ ತೀರ್ಮಾನ ದೇಶದ ಎಲ್ಲಾ ದೈ ವಸ್ಥಾನ ಹಾಗೂ ದೇವಸ್ಥಾನಗಳಿಗೂ, ದೈವ ಸ್ಥಾನ, ದೇವಸ್ಥಾನಗಳ ಆಡಳಿತ ಮಂಡಳಿಗಳಿಗೂ ಕೂಡ ಮಾದರಿ ಹಾಗೂ ಆದರ್ಶಪ್ರಾಯವಾಗಿದೆ ಎಂದು ನಾಡಿನಾದ್ಯಂತದಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ಇದೇ ಕಾರಣಕ್ಕಾಗಿಯೇ ಇದೀಗ ಈ ಹನುಮಗಿರಿ ಕ್ಷೇತ್ರಕ್ಕೆ ನಾಡಿನೆಲ್ಲೆಡೆಯಿಂದ ಭಕ್ತ ಜನಪ್ರವಾಹವೇ ಹರಿದು ಬರಲಾರಂಭಿಸಿದೆ.

