ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕರು, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಕಾರ್ಯಕ್ರಮ ಸಂಯೋಜಕರಾಗಿರುವ ಶ್ರೀ ನಾರಾಯಣ ಕುಂಬ್ರ ಸಾಹಿತ್ಯದ ಮೊಳಗಲಿ ಕನ್ನಡದ ಕಹಳೆ ದೃಶ್ಯ ಗೀತೆಯನ್ನು ನಂದಗೋಕುಲ ಬಡಾವಣೆ ಗೋಕುಲ ನಗರ ಮುಕ್ರಂಪಾಡಿ ಇಲ್ಲಿ ಐ ಎ ಎಸ್ ಮತ್ತು ಐ ಪಿ ಎಸ್ ದರ್ಶನ ಸಂಸ್ಥೆ ಪುತ್ತೂರು ಸ್ಥಾಪಕಾಧ್ಯಕ್ಷರು, ತರಬೇತುದಾರರಾದ ಶ್ರೀ ದರ್ಶನ್ ಗರ್ತಿಕೆರೆ ರವರು ಇಂದು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ದ್ವಾರಕಾ ಪ್ರತಿಷ್ಠಾನ(ರಿ ) ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಶ್ರೀ ಪುತ್ತೂರು ಉಮೇಶ್ ನಾಯಕ್,ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ,ಡಾ. ವಿಜಯ ಕುಮಾರ್ ಮೊಳೆಯಾರ್,ಡಾ. ಶ್ರೀಧರ ಹೆಚ್. ಜಿ, ಶ್ರೀ ಗಣರಾಜ ಕುಂಬ್ಳೆ, ಶ್ರೀ ಅಮೃತಕೃಷ್ಣ,ನಾರಾಯಣ ಕುಂಬ್ರ ಉಪಸ್ಥಿತರಿದ್ದರು.

