ಪುತ್ತೂರು: ವಿದ್ಯಾರ್ಥಿಗಳು ಅವಕಾಶಗಳ ಸದ್ಬಳಕೆ ಮಾಡಿಕೊಂಡಾಗ ಯಶಸ್ಸು ಸಾಧ್ಯ: ಬಾಲಕೃಷ್ಣ ಕಾರಂತ್ ಎರುಂಬು ಅಭಿಮತ

0
25

ಕರ್ನಾಟಕ ರಾಜ್ಯ ಮಕ್ಕಳ ಸಾ. ಪರಿಷತ್ತು (ರಿ.) ಬಂಟ್ವಾಳ ತಾ. ಘಟಕ ನೇತೃತ್ವದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ತಾಲೂಕು ಇದರ ಸಂಯೋಜನೆಯಲ್ಲಿ ದಿನಾಂಕ: 23.8.2025ರಂದು ಶ್ರೀ ವಿಷ್ಣುಮಂಗಲ ದೇವಸ್ಥಾನ ಎರುಂಬು ಅಳಿಕೆ ಇದರ ವಠಾರದಲ್ಲಿ ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ :2025″ರ ಸಭಾಧ್ಯಕ್ಷತೆ ವಹಿಸಿ ಕ. ರಾ. ಮ. ಸಾ. ಪರಿಷತ್ತು ಬಂಟ್ವಾಳ ತಾ. ಘಟಕ ಇದರ ಗೌರವಾಧ್ಯಕ್ಷರಾದ ಬಾಲಕೃಷ್ಣ ಕಾರಂತ್ ಎರುಂಬುರವರು ” ವಿದ್ಯಾರ್ಥಿಗಳು ಅವಕಾಶಗಳ ಸದ್ಬಳಕೆ ಮಾಡಿಕೊಂಡಾಗ ಯಶಸ್ಸು ಸಾಧ್ಯ. ಸಾಹಿತ್ಯವು ಯಾವ ವಿದ್ಯಾರ್ಥಿಗಳ ಅಧ್ಯಯನಕ್ಕೂ ಅಡಚಣೆಯನ್ನು ಉಂಟು ಮಾಡುವುದಿಲ್ಲವೆಂದು” ಅಭಿಮತ ವ್ಯಕ್ತಪಡಿಸಿದರು ಕನ್ನಡ ಸಾ. ಪರಿಷತ್ತು ಪುತ್ತೂರು ತಾ. ಘಟಕ ಇದರ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್ ದೀಪಪ್ರಜ್ವಲನೆ ಮೂಲಕ ಸಮಾರಂಭವನ್ನು ಉದ್ಘಾಟಿಸಿ “ಸ್ವರಚಿತ ಕವನಗಳೊಂದಿಗೆ ಸಂಭ್ರಮಿಸುತ್ತಿರುವ ಮಕ್ಕಳು ಭವಿಷ್ಯದ ಬಗ್ಗೆ ಹೊಸಭರವಸೆಯನ್ನು ಮೂಡಿಸುತ್ತಾರೆ ಇವರಿಗೆ ವೇದಿಕೆಯನ್ನೊದಗಿಸುವುದು ನಮ್ಮೆಲ್ಲರ ಕರ್ತವ್ಯಎಂದು ಶುಭಹಾರೈಸಿದರು.
ಮಕ್ಕಳ ಕಲಾ ಲೋಕ ಬಂಟ್ವಾಳ ಇದರ ಅಧ್ಯಕ್ಷರಾದ ರಮೇಶ್ ಬಾಯಾರು,ಹಿರಿಯ ಸಾಹಿತಿಗಳು ಮತ್ತು ಮಧು ಪ್ರಪಂಚ ಪತ್ರಿಕೆಯ ಸಂಪಾದಕರಾದ ನಾರಾಯಣ ರೈ ಕುಕ್ಕುವಳ್ಳಿ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.ಸಭಾ ಕಾರ್ಯಕ್ರಮದಲ್ಲಿ 2023ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು,
ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ-2025ರ ಅಧ್ಯಕ್ಷತೆಯನ್ನು ವಹಿಸಿರುವ ಗೋಪಾಲಕೃಷ್ಣ ನೇರಳಕಟ್ಟೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶ್ರೀ ವಿಷ್ಣುಮಂಗಲ ಸೇವಾ ಸಮಿತಿ, ಎರುಂಬು ಇದರ ಅಧ್ಯಕ್ಷರಾದ ಶ್ರೀ ವಸಂತ ಕುಲಾಲ್ ಹಾಗು ಸುಜ್ಞಾನ ಮಹಿಳಾ ಮಂಡಲ ಎರುಂಬು ಇದರ ಅಧ್ಯಕ್ಷರಾದ ಶ್ರೀಮತಿ ಶಾಲಿನಿ ಸದಾನಂದ ಶೆಟ್ಟಿ, ಶ್ರೀ ಚಂದ್ರಮೌಳಿ ಕಡಂದೇಲು ಉಪಸ್ಥಿತರಿದ್ದರು. ಶ್ರೀ ನಾರಾಯಣ ಕುಂಬ್ರ ಸ್ವಾಗತಿಸಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾದ ಶ್ರೀಕಲಾ ಕಾರಂತ್ ಅಳಿಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕು.ಧನ್ವಿತಾ ಕಾರಂತ್ ಅಳಿಕೆ ಮತ್ತು ಕು. ಧನುಶ್ರೀ ಎಸ್ ಎರುಂಬು ಪ್ರಾರ್ಥಿಸಿ,ರಶ್ಮಿತಾ ಸುರೇಶ್ ಜೋಗಿಬೆಟ್ಟು ವಂದಿಸಿ, ಶ್ರೀ ಜಗದೀಶ್ ಬಾರಿಕೆ ಕಾರ್ಯಕ್ರಮ ನಿರೂಪಿಸಿದರು,ಎಂ ಎಸ್ ಪೂಜಾ ಅಳಿಕೆ ಸಹಕರಿಸಿದರು.

ಜನಮನ ಗೆದ್ದ ಮಕ್ಕಳ ಕವಿಗೋಷ್ಠಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ ಇದರ ಮುಖ್ಯ ಗುರುಗಳು, ರಾಷ್ಟ್ರೀಯ ತರಬೇತುದಾರರು, ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀ ಗೋಪಾಲಕೃಷ್ಣ ನೇರಳಕಟ್ಟೆ,ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಗೆ, ದ.ಕ. ಆಮಂತ್ರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷರಾದ ವಿಂಧ್ಯಾ ಎಸ್ ರೈ ಚಾಲನೆ ನೀಡಿದರು.ಕವಿಗೋಷ್ಠಿಯಲ್ಲಿ ಸ. ಉ. ಹಿ. ಪ್ರಾ.ಶಾಲೆ ಪಡಿಬಾಗಿಲು ಇಲ್ಲಿನ ವಿನಮ್ರ, ಸಾನ್ಯ,ಬಿಂದುಶ್ರೀ, ನೇಹಲ್, ಹಿತಾಶ್ರೀ, ಅನನ್ಯ, ಹನ್ಸಿಕ, ಧನ್ವಿಕಾ, ಧನ್ವಿತ್, ಭುವಿಕಾ, ರಕ್ಷಣ್, ಕೆ. ಪಿ.ಚೈತನ್ಯ, ದ.ಕ. ಜಿ.ಪಂ. ಉ. ಹಿ. ಪ್ರಾ. ಶಾಲೆ ದೇಲಂತಬೆಟ್ಟು ಇಲ್ಲಿನ ವಿದ್ಯಾರ್ಥಿಗಳಾದ ಅವಿಲ್ ಡಿಸೋಜ, ಖದೀಜತ್ ಮಿನ್ನ,ತನವ್,ಅನ್ವಿ, ಲಕ್ಷಿತಾ, ಯಶ್ವಿತ್,ಫಾತಿಮತ್ ನಾದಿಯಾ, ಫಾತಿಮತ್ ನಾಮಿಯಾ, ಫಾತಿಮತ್ ಶಝ್ನ, ಅಹಲಂ, ಹಿತ, ಖದೀಜತ್ ಅಸ್ನ. ಪ್ರೌಢಶಾಲೆ ಕೇಪು ಕಲ್ಲಂಗಳ ಇಲ್ಲಿನ ರಚನೇಶ್ವರಿ, ಗುಣಶ್ರೀ,ಧನ್ವಿತಾ ಜಿ. ಪಿ,ಪ್ರಜ್ಞಾ, ರಕ್ಷಿತಾ,ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಯ ಮೌಲ್ಯ ಡಿ.ಎಂ,ಸೋಹಮ್ ಶ್ರೀಧರ,ಧನುಶ್ರೀ ಎಸ್ ಅಳಿಕೆ, ಧನ್ವಿತಾ ಕಾರಂತ್ ಅಳಿಕೆ, ಶಿರ್ಷಿತಾ ಕಾರಂತ್ ಅಳಿಕೆ, ಹಿರಿಯ ಮತ್ತು ಯುವ ಕವಿಗಳಾದ ಶ್ರೀ ಸಂಜೀವ ಮಿತ್ತಳಿಕೆ, ಮಲ್ಲಿಕಾ ಜೆ ರೈ, ಗಿರೀಶ್ ಪೆರಿಯಡ್ಕ, ಆತ್ಮಿಕಾ ಏಮಾಜೆ, ಮಮತಾ ಡಿ ಕೆ ಅನಿಲಕಟ್ಟೆ, ಶೈಲಜಾ ಕೇಕಣಾಜೆ, ತಶ್ವಿ ಶಾಂಭವಿ ಜೋಗಿಬೆಟ್ಟು,ಲೇಖನ ಏಮಾಜೆ, ಎಂ ಎಸ್ ಪೂಜಾ ಅಳಿಕೆ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಅಪೂರ್ವ ಕಾರಂತ್ ದರ್ಬೆ ಭಾಗವಹಿಸಿದ್ದರು.ಎಳೆಯ ಕವಿಗಳ ಕವನ ವಾಚನ ಕಲರವ ಎಲ್ಲರ ಮನರಂಜಿಸಿತು. ಕು. ಅಪೂರ್ವ ಕಾರಂತ್ ಮತ್ತು ಕು. ಶಿರ್ಷಿತಾ ಕಾರಂತ್ ಕವಿಗೋಷ್ಠಿ ನಿರೂಪಣೆಗೈದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

LEAVE A REPLY

Please enter your comment!
Please enter your name here