ಪುತ್ತೂರು:ಗತಕಾಲದ ತುಳು ಪರಂಪರೆಯನ್ನು ಇಂದಿನ ಜನಾಂಗಕ್ಕೆ ತಿಳಿಸುವ ಕಾರ್ಯಕ್ರಮಗಳನ್ನು ಪುತ್ತೂರು ತುಳುಕೂಟವು ಸತತವಾಗಿ ಹಮ್ಮಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದು ಜಿ.ಎಲ್. ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಲರಾಮ ಆಚಾರ್ಯ ಹೇಳಿದರು. ಪುತ್ತೂರು ತುಳುಕೂಟವು ಚಿಗುರೆಲೆ ಸಾಹಿತ್ಯ ಬಳಗದ ಜತೆಗೂಡಿ ನಡೆಸಿದ ತುಳು ಕಬಿಕೂಟ -2025 ಅನ್ನು, ವಿದ್ವಾಂಸ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ರಚನೆಯ ತುಳು ಗೀತೆಯನ್ನು ಓದುವ ಮೂಲಕ ಬಲರಾಮ ಆಚಾರ್ಯ ಅವರು ಕವಿಗೋಷ್ಠಿಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ಸಾಹಿತಿ, ಕವಯಿತ್ರಿ, ಸುದಾನ ಶಾಲಾ ಅಧ್ಯಾಪಕಿ ಕವಿತಾ ಅಡೂರು ಅವರು, ಉದಯೋನ್ಮುಖ ಕವಿಗಳು ಕವಿತೆ ಬರೆಯುವ ವಿಷಯದಲ್ಲಿ ಮಾರ್ಗದರ್ಶನ ನೀಡಿದರು.
ಕವಿಗೋಷ್ಠಿಯ ಜತೆಗೆ ಕವಿತೆ ರಚನೆಯ ಕಾರ್ಯಾಗಾರ ಹಮ್ಮಿಕೊಳ್ಳಿ – ಅಕ್ಷತಾರಾಜ್ ಪೆರ್ಲ
ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಕವಯಿತ್ರಿ, ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿ ಅಕ್ಷತಾರಾಜ್ ಪೆರ್ಲ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸಾಹಿತ್ಯ ರಚಿಸುವ ಉತ್ಸಾಹ ಇರುವ ಯುವಜನರಿಗೆ ಕವಿತೆ ರಚನೆಯ ಕಮ್ಮಟಗಳನ್ನು ಕೂಡಾ ಹಮ್ಮಿಕೊಳ್ಳಿ ಎಂದು ಸಲಹೆ ನೀಡಿದರು.ಕವಿಗೋಷ್ಠಿಯಲ್ಲಿ ಶ್ವೇತಾ ಡಿ ಬಡಗಬೆಳ್ಳೂರು, ಸವಿತ ಕರ್ಕೇರ ಕಾವೂರು, ಸವಿತಾ ಡಿ ಶೆಟ್ಟಿ ಕೆಮ್ಮಾಯಿ, ದಿವ್ಯ ರೈ ಪಿ ಪೆರುವಾಜೆ, ರಶ್ಮಿತಾ ಸುರೇಶ್ ಜೋಗಿಬೆಟ್ಟು,ವಿಶ್ವನಾಥ್ ಕುಲಾಲ್ ಮಿತ್ತೂರು, ಅಶೋಕ್ ಎನ್ ಕಡೇಶಿವಾಲಯ, ಗಿರೀಶ್ ಪೆರಿಯಡ್ಕ, ಮುಸ್ತಫಾ ಎಂ ಎ ಬೆಳ್ಳಾರೆ, ಪ್ರಿಯಾ ಸುಳ್ಯ, ಪೂವಪ್ಪ ನೇರಳಕಟ್ಟೆ,ಶ್ರೀಶಾವಾಸವಿ ತುಳುನಾಡ್,ಕಾವ್ಯಶ್ರೀ, ಸಂಜೀವ ಮಿತ್ತಳಿಕೆ,ಅಕ್ಷತಾ ನಾಗನಕಜೆ, ಚಂದ್ರಾವತಿ ರೈ ಪಾಲ್ತಾಡಿ, ಸುನೀತಾ ಶ್ರೀರಾಮ್ ಕೊಯಿಲ, ರೂಪ ವಿನಯ್, ಅಶ್ವಿಜ ಶ್ರೀಧರ್, ರವಿ ಪಾಂಬಾರು, ಪರಿಮಳ ಜೀವಪರಿ, ಹರೀಶ್ ಮಂಜೊಟ್ಟಿ, ಮಣಿ ಮುಂಡಾಜೆ, ಪದ್ಮನಾಭ ಪೂಜಾರಿ ನೇರಂಬೋಳ್,ಪವಿತ್ರ ಎಂ ಬೆಳ್ಳಿಪ್ಪಾಡಿ, ಸಂಧ್ಯಾ ಜಿ ಕೆ ಕುಂಬ್ರ, ಸೌಜನ್ಯ ಬಿ ಎಂ ಕೆಯ್ಯೂರು, ಸುಪ್ರೀತಾ ಚರಣ್ ಪಾಲಪ್ಪೆ ಕಡಬ, ದೇವಕಿ ಜಯಾನಂದ ಬನ್ನೂರು,ಸುಂದರ ಸಾರ್ಯ, ಚೈತನ್ಯ ರೈ, ಪೂರ್ಣಿಮಾ ಪೆರ್ಲಂಪಾಡಿ, ಅಪೂರ್ವ ಕಾರಂತ್ ದರ್ಬೆ
ಇವರುಗಳು ಸ್ವರಚಿತ ತುಳು ಕವನಗಳನ್ನು ವಾಚಿಸಿದರು.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಪ್ರೊಫೆಸರ್ ದತ್ತಾತ್ರೇಯ ರಾವ್, ನಿವೃತ್ತ ಅಧ್ಯಾಪಕ ನಾರಾಯಣ ರೈ ಕುಕ್ಕುವಳ್ಳಿ ಸೇರಿದಂತೆ ಹಾಜರಿದ್ದ 20 ಅಧ್ಯಾಪಕರನ್ನು ಗುರುತಿಸಿ ಗೌರವಿಸಲಾಯಿತು.
ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತುಳುಕೂಟದ ಜತೆಕಾರ್ಯದರ್ಶಿ ನಯನಾ ರೈ ಹಾಗೂ ಚಿಗುರೆಲೆ ಸಾಹಿತ್ಯ ಬಳಗದ ಕಾರ್ಯಕ್ರಮ ಸಂಯೋಜಕರು ನಾರಾಯಣ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ರವಿ ಪಾಂಬಾರ್ ತುಳುನಾಡ ಪೊರ್ಲು ಸುಗಿಪು ಗೀತೆ ಹಾಡಿದರು. ಶ್ರೀ ಜಗದೀಶ್ ಬಾರಿಕೆ, ಕು. ಕಾವ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಶಾವಾಸವಿ ತುಳುನಾಡು, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಅಪೂರ್ವ ಕಾರಂತ್ ಅವರುಗಳು ಸಹಕರಿಸಿ, ಸುಪ್ರೀತಾ ಚರಣ್ ಪಾಲಪ್ಪೆ ವಂದಿಸಿದರು.