ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ,ಇಬ್ಬರು ಆರೋಪಿಗಳ ಬಂಧನ..!

0
29

ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ ಘಟನೆ ಮಾಣಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಸಜಿಪನಡು ನಿವಾಸಿಗಳಾದ, ಅಬ್ದುಲ್ ಲತೀಫ್ ಮತ್ತು ಆಶೀಕ್ ಪಾಷಾ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಪುತ್ತೂರಿನ ಗಡಿಪಿಲದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಆರೋಪಿಗಳು ಕಾರು ಕೆಟ್ಟು ನಿಂತ ಪರಿಣಾಮ ಗೋವುಗಳನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಈ ವೇಳೆ ಸುಮಾರು 5 ಗೋವುಗಳನ್ನ ವಿಶ್ವ ಹಿಂದೂ ಬಜರಂಗದಳ ಕಾರ್ಯಕರ್ತರು ರಕ್ಷಿಸಿದ್ದರು. ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದವರನ್ನ ಕೂಡಲೇ ಪತ್ತೆಹಚ್ಚುವಂತೆ ವಿಎಚ್‌ಪಿ ಆಗ್ರಹಿಸಿತ್ತು. ಘಟನೆ ನಡೆದ ಎರಡು ದಿನಗಳ ಬಳಿಕ ಇದೀಗ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪುತ್ತೂರು ವೃತ್ತ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜಾ ಮಾರ್ಗದರ್ಶನದಲ್ಲಿ ಉಪನಿರೀಕ್ಷಕರಾದ ಸೇಸಮ್ಮ ಮತ್ತು ಅಪರಾಧ ವಿಭಾಗದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here