ಮಧ್ಯಪಾನದ ದುರಭ್ಯಾಸ ತ್ಯಜಿಸಿ ಸುಂದರ ಜೀವನ ಕಟ್ಟಿಕೊಳ್ಳಿ.. ವೈ ಬಿ ಸುಂದರ್ ಇರಾ

0
175

ಬಂಟ್ವಾಳ :ಮಧ್ಯಪಾನದ ದುರಭ್ಯಾಸ ತ್ಯಜಿಸಿ ಸುಂದರ ಜೀವನ ಕಟ್ಟಿಕೊಳ್ಳಿ ಎಂದು ಇರ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ವೈ ಬಿ ಸುಂದರ್ ಇರಾ ಹೇಳಿದರು.

ಅವರು ಮಂಗಳವಾರ ಬಂಟ್ವಾಳ ತಾಲೂಕಿನ ಮೊಂತಿಮಾರ್ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋ ಜನೆ ಬಿ ಸಿ ಟ್ರಸ್ಟ್ (ರಿ.)ವಿಟ್ಲ ತಾಲೂಕು, ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಟ್ರಸ್ಟ್ (ರಿ.)ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಾಯಮ ಮಂಡಳಿ ಬೆಂಗಳೂರು, ತಾಲೂಕು ಜನಜಾಗ್ರತಿಕ ವೇದಿಕ ಬಂಟ್ವಾಳ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೊಂತಿಮಾರ್ ಮಂಚಿ, ಪ್ರಗತಿಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ವಿಟ್ಲ, ಜಸ್ಟೀಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ, ಲಯನ್ಸ್ ಕ್ಲಬ್ ವಿಟ್ಲ, ನವಜೀವನ ಸಮಿತಿ ವಿಟ್ಲ ತಾಲೂಕು, ಶೋರ್ಯಾ ವೀಪತು ವಿವಾಹಣ ಸಮಿತಿ ವಿಟ್ಲ, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ದಂಡಿಗೆ
ಶ್ರೀ ಧರ್ಮಸ್ಥಳ ಮಂಜುನಾಥಶ್ವರ ವ್ಯಾಸನ ಮುಕ್ತ ಮಾತು ಸಶೋಧನ ಕೇಂದ್ರ ಲೈಲಾ ಬೆಳ್ತಂಗಡಿ ಇದರ ವಿಸ್ತರಣ ಕಾರ್ಯಕ್ರಮ ಅಂಗವಾಗಿ ನಡೆಯುತ್ತಿರುವ 1937 ನೇ ಮದ್ಯಾವರ್ಜನಾ ಶಿಬಿರದ 4 ನೇ ದಿನದ ಸಭಾ ಕಾರ್ಯಕ್ರಮ ಉದ್ದೇಶಿ ಮಾತನಾಡಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ಬಿನ ಗೋಪಾಲಾಚಾರ್ ಮಂಚಿ, ಲಕ್ಷ್ಮೀನಾರಾಯಣ ಅಂದ್ಯಂತಾಯ ಕುದ್ರಿಯಾ, ವಿಟ್ಲ ತಾಲೂಕು ಬಜನಾ ಪರಿಷತ್ ಅಧ್ಯಕ್ಷ ದೇವಿದಾಸ್ ಶೆಟ್ಟಿ ಪಾಲ್ತಾಜೆ,ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ನವೀನ್ ಚಂದ್ರ, ಪ್ರಗತಿಪರ ಕೃಷಿಕರಾದ ಚಿತ್ತರಂಜನ್ ಕರೈ, ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ಮೊದಲಾದವರು ಉಪಸ್ಥಿತರಿದ್ದರು.

4ನೇ ದಿನದ ಶಿಬಿರದ ದೈನಂದಿನ ಕರ್ತವ್ಯ ನಿರ್ವಹಣೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ಹಾಗೂ ಮುಡಿಪು ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಪ್ರಗತಿ ಬಂದು ಒಕ್ಕೂಟ, ನವ ಜೀವನ ಸಮಿತಿ, ಶೌರ್ಯ ವಿಪತ್ತು ತಂಡದ ಸ್ವಯಂಸೇವಕರು, ನಿರ್ವಹಿಸಿದರು.
ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖರಾಜ್ ಸ್ವಾಗತಿಸಿ, ಮುಡಿಪು ವಲಯ ಮೇಲ್ವಿಚಾರಕಿ ಪ್ರೇಮಲತಾ ವಂದಿಸಿದರು.

LEAVE A REPLY

Please enter your comment!
Please enter your name here