ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕ.ರ.ವೇ ಉಸ್ತುವಾರಿ ರಘು ಪಾಳ್ಯ ಅವರಿಗೆ ಕನ್ನಡ ಸೇನಾನಿ ಬಿರುದು

0
52

ಮೂಲ್ಕಿ : ಕನ್ನಡ ರಾಜ್ಯೋತ್ಸವ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲ್ಲೂಕಿನ ಸಾಹಿತ್ಯ ಪರಿಷತ್, ಬಪ್ಪನಾಡು ಇನ್ಸಪಯರ ಲಯನ್ಸ್ ಸೇವಾ ಸಂಸ್ಥೆ, ಮೂಲ್ಕಿ ತಾಲ್ಲೂಕು ಕರವೇ ಘಟಕ ಹಾಗೂ ಪಿ ಎಂ ಶ್ರೀ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಾಲಾ ವತಿಯಿಂದ ನೆಡೆದ 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿಗಳಾದ ರಘು ಪಾಳ್ಯ ರವರ ಕನ್ನಡ ಪರ ಹೋರಾಟಗಳು ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಇವರಿಗೆ ಕನ್ನಡ ಸೇನಾನಿ ಎಂಬ ಬಿರುದು ನೀಡಿ ಗೌರವಿಸಲಾಯಿತು

ಇದೆ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ರಾದ ಹರಿಕೃಷ್ಣ ಪುನರುರು ಮೂಲ್ಕಿ ತಾಲ್ಲೂಕಿನ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಿಥುನ್ ಉಡುಪ ಕೋಡೆತ್ತುರು ಬಪ್ಪನಾಡು ಇನ್ಸಪಯರನ ಲಯನ್ಸ್ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್, ಬಪ್ಪನಾಡು ಇನ್ಸ್ಪೆಕ್ಟರ್ ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷರಾದ ಅನಿಲ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಮೂಲ್ಕಿ ತಾಲೂಕಿನ ಅಧ್ಯಕ್ಷರಾದ ಮಂಜುನಾಥ್, ಕಲ್ಲಪ್ಪ, ಪ್ರೌಢಶಾಲೆ ಶಾಲೇಯ ಮುಖ್ಯೋಪಾಧ್ಯಾಯರಾದ ದಿನೇಶ್ ಕೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜೋತಿ ಹಾಗೂ ಸಾಹಿತ್ಯ ಪರಿಷತ್ತಿನ ಸದಸ್ಯರು, ಲಯನ್ಸ್ ಸೇವಾ ಸಂಸ್ಥೆಯ ಸದಸ್ಯರು, ಕರವೇ ಸದಸ್ಯರು ಹಾಗೂ ಶಾಲೇಯ ಸರ್ವ ಶಿಕ್ಷಕ ವೃಂದದವರು, ಶಾಲೇಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here