ಮಂಗಳೂರು : ಬಂಟ್ವಾಳದ ಇರಾಕೋಡಿಯಲ್ಲಿ ನಡೆದ ಅಬ್ದುಲ್ ರಹೀಂ ಹತ್ಯೆ ಬಗ್ಗೆ ಜಿಲ್ಲೆಯಲ್ಲಿ ಅಘೋಷಿತ ಬಂದ್ ವಾತಾವಾರಣ ಇದೆ. ಬಿಎನ್ಎಸ್ 163 ಸೆಕ್ಷನ್ ಹಾಕಲಾಗಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈ ನಡುವೆ ಮಂಗಳೂರು ನಗರ ಹೊರವಲಯದ ಸುರತ್ನಲ್‌ನಲ್ಲಿ ದುಷ್ಕರ್ಮಿಗಳು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಮಂಗಳೂರು ಕಟೀಲು ಕಿನ್ನಿಗೋಳಿ ತೆರಳುವ ನಂದಿನಿ ಹೆಸರಿನ ಬಸ್ಸಿಗೆ ಕಲ್ಲೆ *ಸೆಯಲಾಗಿದೆ. ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ ಸೇರಿದಂತೆ ಈ ಭಾಗಕ್ಕೆ ತೆರಳುವ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದೆ. ಸ್ಥಳದಲ್ಲಿ ಉದ್ವಿಗ್ನು ಸ್ಥಿತಿ ನಿರ್ಮಾಣವಾಗಿದೆ.