ರಾಜಸ್ಥಾನ: ನದಿಯಲ್ಲಿ ಮುಳುಗಿ 8 ಯುವಕರು ಮೃತ್ಯು

0
239

ರಾಜಸ್ಥಾನ: ಬನಾಸ್ ನದಿಯಲ್ಲಿ ಮುಳುಗಿ 8 ಯುವಕರು ಮೃತಪಟ್ಟಿರುವ ಘಟನೆ ಟೋಂಕ್ ಜಿಲ್ಲೆಯಲ್ಲಿ ನಡೆದಿದೆ. ಗೆಳೆಯರ ಗುಂಪು ಈಜಲು ನದಿಗೆ ಹೋಗಿತ್ತು ಎಂದು ಹೇಳಲಾಗಿದೆ.

ಮೃತರು ಟೋಂಕ್ ಮತ್ತು ಜೈಪುರ ಜಿಲ್ಲೆಗಳ ವಿವಿಧ ಭಾಗಗಳಿಂದ ಬಂದವರು ಎನ್ನಲಾಗಿದೆ. ಅವರು ಪಿಕ್ನಿಕ್‌ಗೆ ಹೋಗಿದ್ದರು ಎಂದು ಹೇಳಲಾಗಿದೆ. 25ರಿಂದ 30 ವರ್ಷ ವಯಸ್ಸಿನ 11 ಯುವಕರ ಗುಂಪು ಸ್ನಾನ ಮಾಡಲು ನದಿಗೆ ಇಳಿದಿದ್ದಾರೆ. ಆದರೆ, ಆಳವಾದ ನೀರಿನಲ್ಲಿ ಇಳಿದಾಗ ಈ ದುರಂತ ಸಂಭವಿಸಿದೆ.

ಅವರನ್ನು ಉಳಿಸುವ ಪ್ರಯತ್ನಗಳ ಹೊರತಾಗಿಯೂ ಪ್ರಜ್ಞೆ ತಪ್ಪಿದ್ದ 8 ಜನರನ್ನು ಹೊರಗೆಳೆದು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರು ಬರುವಾಗಲೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here