ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್ (ರಿ.) ಇದರ ತೀರ್ಪುಗಾರರ ಸಂಚಾಲಕರನ್ನಾಗಿ ಕಂಬಳ ಕ್ಷೇತ್ರದ ಸಾಧಕ ಪ್ರಧಾನ ತೀರ್ಪುಗಾರರಾದಂತಹ ಮಾನ್ಯ ಶ್ರೀ ರಾಜೀವ ಶೆಟ್ಟಿ ಎಡ್ತೂರು ರವರನ್ನು ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ, ಬೆಳಪುರವರು ನೇಮಕ ಮಾಡಿರುತ್ತಾರೆ. ಮಾನ್ಯ ಶ್ರೀ ರಾಜೀವ ಶೆಟ್ಟಿ ಎಡ್ತೂರು ರವರು ಕಳೆದ 35 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಸಕ್ರೀಯರಾಗಿ ವೀಕ್ಷಕ ವಿವರಣೆ ಹಾಗೂ ತೀರ್ಪುಗಾರರಾಗಿ ಕಂಬಳದ ಯಶಸ್ವಿಗೆ ಕಾರಣಿಕರ್ತರಾಗಿರುತ್ತಾರೆ. ಇವರನ್ನು ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್ನ ಅಧಿಕೃತ ತೀರ್ಪುಗಾರರ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.

