ಚಿನ್ನದ ಸರವನ್ನು ಪ್ರಾಮಾಣಿಕತೆಯಿಂದ ನೀಡಿದ ರಾಜೇಶ್ ಹೆಗಡೆ ಇವರಿಗೆ ವಿಶಾಲ್ ಮೋಟರ್ಸ್ನ ಮಾಲೀಕರಿಂದ ಮೆಚ್ಚುಗೆ

0
27

ವಿಶಾಲ್ ಮೋಟಾರ್ಸ್ ಬಸ್ಸಿನ ಕಂಡಕ್ಟರ್ ರಾಜೇಶ್ ಹೆಗ್ಡೆ ಇವರಿಗೆ ಬಸ್ಸಿನಲ್ಲಿ ಸುಮಾರು 3,00,000 ಬೆಲೆ ಬಾಳುವ ಚಿನ್ನದ ಸರ ಸಿಕ್ಕಿದ್ದು ಚಿನ್ನವನ್ನು ತಮ್ಮ ಬಳಿ ಸುರಕ್ಷಿತವಾಗಿ ಇರಿಸಿಕೊಂಡ ಅವರು ಯಾವುದೇ ಲಾಭದ ಆಸೆಗೆ ಒಳಗಾಗದೆ ಚಿನ್ನ ಸಿಕ್ಕಿದ ಬಗ್ಗೆ ವಾಟ್ಸಪ್ ಮೂಲಕ ಪ್ರಚಾರ ಮಾಡಿರುತ್ತಾರೆ.

ಈ ಸರವು ಕುಂದಾಪುರ ಮೂಲದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಯಾದ ಸುದೀಕ್ಷಾ ರವರು ನಿನ್ನೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಕಳೆದುಕೊಂಡಿದ್ದು ಅವರು ಸೂಕ್ತದ ಮಾಹಿತಿಯನ್ನು ನೀಡಿ ಚಿನ್ನದ ಸರವನ್ನು ಮರಳಿ ಪಡೆದಿರುತ್ತಾರೆ .

ಚಿನ್ನದ ಸರವನ್ನು ಪ್ರಾಮಾಣಿಕತೆಯಿಂದ ನೀಡಿದ ರಾಜೇಶ್ ಹೆಗಡೆ ಇವರಿಗೆ ವಿಶಾಲ್ ಮೋಟರ್ಸ್ನ ಮಾಲೀಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ. ಇವರಿಗೆ ವಿಶಾಲ್ ಮೋಟರ್ಸ್‌ ಮತ್ತು ಸಿಸಿಟಿ ಸಂಸ್ಥೆಯ ಪರವಾಗಿ ಅಭಿನಂದನೆಗಳು.

LEAVE A REPLY

Please enter your comment!
Please enter your name here