ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಸಾಣೂರು ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ

0
34

ರೋಟರಿ ಕ್ಲಬ್ ಕಾರ್ಕಳ ಇದರ ಪ್ರಾಯೋಜಕತ್ವದಲ್ಲಿ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಸಾಣೂರು ಇಲ್ಲಿ ಕಾರ್ಕಳ ಕ್ಲಬ್ಬಿನ ವತಿಯಿಂದ
ಹತ್ತನೇ ಇಂಟರ್ಯಾಕ್ಟ್ ಕ್ಲಬ್ಬಿನ ಪದಗ್ರಹಣ ಸಮಾರಂಭವು ನಡೆಯಿತು.

ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ರೋಟರಿಯ ಮಾಜಿ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿಯವರು ರೋಟರಿಯ ಇತಿಹಾಸ ಹಾಗೂ ಕಾರ್ಕಳ ರೋಟರಿಯ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಇಂಟರ್ಯಾಕ್ಟ್ ಕ್ಲಬ್ಬಿನ ನೂತನ ಅಧ್ಯಕ್ಷ ಲೇಖನ್ ವಿ.ಜೈನ್ ಮತ್ತು ಕಾರ್ಯದರ್ಶಿ ಅರುಷಿ ಪ್ರಭು ರವರಿಗೆ ಪದಪ್ರದಾನ ಮಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿ ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನಾಯಕರಾಗಬೇಕೆ ಹೊರತು ಹಿಂಬಾಲಕರಾಗಬಾರದು. ಭವಿಷ್ಯದಲ್ಲಿ ಸಮಾಜದ ಆಸ್ತಿಯಾಗಬೇಕು ಎಂದರು.

ರೋಟರಿ ಕ್ಲಬ್ಬಿನ ಇಂಟರ್ಯಾಕ್ಟ್ ಚೇರ್ಮನ್ ಬಾಲಕೃಷ್ಣ ದೇವಾಡಿಗ ಇಂಟರಾಕ್ಟ್ ಕ್ಲಬ್ಬಿನ ವತಿಯಿಂದ ಮಾಡಬಹುದಾದ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಮಧುಸೂದನ್ ರೈ,ಇಂಟರ್ಯಾಕ್ಟ್ ಕ್ಲಬ್ಬಿನ ಕೋರ್ಡಿನೇಟರ್ ಲಕ್ಷ್ಮೀನಾರಾಯಣ ನಾಯಕ್, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಚೇತನ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ರೋಟರಿ ಕ್ಲಬ್ಬಿನ ಮಾಜಿ ಸಹಾಯಕ ಗವರ್ನರ್ ಶೈಲೇಂದ್ರ ರಾವ್, ಸದಸ್ಯರಾದ ಡಾ. ಯಶೋಧರ್ ,ಜಗದೀಶ್ ಟಿ.ಎ, ವಿಜಯೇಂದ್ರ ಕುಮಾರ್, ವಸಂತ್ ಎಂ, ಅರುಣ್ ಕುಮಾರ್ ಶೆಟ್ಟಿ , ವೃಂದಾ ಹರಿಪ್ರಕಾಶ್, ಶ್ರೀಶ ಭಟ್ ಮತ್ತು ರಮೇಶ್ ರಾವ್ ಬಿ. ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಲೇಖನ್ ವಿ ಜೈನ್ ಸ್ವಾಗತಿಸಿದರು. ಶಿಕ್ಷಕಿ ಸಂಗೀತ ಎಸ್ ಕರುಣಾಕರ್ ನಿರೂಪಿಸಿದರು. ವಿನುತಾ ರೈ ವಂದಿಸಿದರು.

LEAVE A REPLY

Please enter your comment!
Please enter your name here