ಭಗಿನಿ ಸಮಾಜದ ಸಹೋದರಿಯರೊಂದಿಗೆ “ರಕ್ಷಾಬಂಧನ ಸಂಭ್ರಮ”

0
133

ಮಂಗಳೂರು: ರಾಜಕೇಸರಿ ಸೇವಾ ಟ್ರಸ್ಟ್ (ರಿ) ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ರವರ ಅಧ್ಯಕ್ಷತೆಯಲ್ಲಿ 567 ನೇ ಸೇವಾ ಯೋಜನೆಯ ಅಂಗವಾಗಿ ಭಗಿನಿ ಸಮಾಜದ ಸಹೋದರಿಯರೊಂದಿಗೆ “ರಕ್ಷಾಬಂಧನ ಸಂಭ್ರಮ” ಕಾರ್ಯಕ್ರಮವು ಜೆಪ್ಪು ಮಾರ್ಕೆಟ್ ಬಳಿ ಇರುವ ಭಗಿನಿ ಸಮಾಜದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಯಿತು.
ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸಂತೋಷ್ ಕೊಲ್ಯರವರು ಪ್ರಸ್ತಾವನೆಗೈದರು. ಮಂಗಳೂರು ಮಹಾನಗರ ಸಾಮರಸ್ಯ ಟೋಳಿ ಸದಸ್ಯರಾದ ಪ್ರಸಾದ್ ಕಣ್ಣೂರ್ ರವರು ಪ್ರಧಾನ ಭಾಷಣಗಾರರಾಗಿ ಉಪಸ್ಥಿತರಿದ್ದು ರಕ್ಷಾಬಂಧನ ಆಚರಣೆಯ ಮೌಲ್ಯ ಮತ್ತು ಔಚಿತ್ಯದ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ ಭಗಿನಿ ಸಮಾಜದ ಅಧ್ಯಕ್ಷರಾದ ರತ್ನಾ.ಟಿ.ಆಳ್ವ ರವರು ಇಂತಹ ಕಾರ್ಯಕ್ರಮಗಳು ಸಹೋದರತ್ವ, ಸಾಮರಸ್ಯ ಮತ್ತು ಸ್ವಾಭಿಮಾನದ ಸಂಕೇತವೆಂದು ಬಣ್ಣಿಸಿದರು.
ಭಗಿನಿ ಸಮಾಜದ ಉಪಾಧ್ಯಕ್ಷರಾದ ಚಿತ್ರಾ ಪ್ರಭು, ಸಾಮಾಜಿಕ ಸೇವಾಕರ್ತೆ ಶಬರಿ ನಿತಿನ್ ಶೆಟ್ಟಿ, ಸಂಸ್ಥೆಯ ಜಿಲ್ಲಾ ಸಂಚಾಲಕರಾದ ಪ್ರಸಾದ್ ಕುಲಾಲ್ ಮತ್ತು ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸತೀಶ್ ಕಂಗಿತ್ತಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಲಾಲ್ ಮಂಗಳಾದೇವಿ ರವರು ಸ್ವಾಗತಿಸಿದರು. ಸಂಸ್ಥೆಯ ಸಹ ಸಂಘಟನಾ ಕಾರ್ಯದರ್ಶಿ ವರುಣ್ ಕುಮಾರ್ ಬಪ್ಪನಾಡು ರವರು ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಕೋಶಾಧಿಕಾರಿ ಪ್ರವೀಣ್ ಕುಲಾಲ್ ರವರು ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ನೆರೆದವರೆಲ್ಲರೂ ಪರಸ್ಪರ ರಕ್ಷೆಯನ್ನು ಕಟ್ಟುವ ಮೂಲಕ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here