ರಾಮ್ ಫ್ರೆಂಡ್ಸ್ (ರಿ.) ಕಟೀಲ್ ಸೇವಾ ತಂಡದ 6ನೇ ವರ್ಷದ ಸಂಭ್ರಮಾಚರಣೆ, ಸಹಾಯ ಹಸ್ತ ನಿಧಿ ವಿತರಣೆ

0
153

ಕಟೀಲು: ರಾಮ್ ಫ್ರೆಂಡ್ಸ್ (ರಿ.) ಕಟೀಲು ತಂಡದ 6ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯಧನ ವಿತರಣೆ ಕಾರ್ಯಕ್ರಮ ನಮ್ಮ ಹಿರಿಯರ ಮನೆ ಆಶ್ರಮ ಸ್ನೇಹ ಭಾರತಿ ವಿದ್ಯಾ ಸಂಸ್ಥೆ (ರಿ.) ಗುಡ್ಡೆಯಂಗಡಿ ಅರಳ ಇಲ್ಲಿ ಜರುಗಿತು.

ಕಾರ್ಯಕ್ರಮವನ್ನು ರಂಜಿತ್ ಪೂಜಾರಿ ತೋಡಾರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೃದ್ಧಾಶ್ರಮಕ್ಕೆ ಅಗತ್ಯವಿರುವ ರೂ. 20000 ಮೌಲ್ಯದ ವಸ್ತುಗಳನ್ನು ನೀಡಲಾಯಿತು. ಹಾಗೂ 2 ಅಶಕ್ತ ಕುಟುಂಬಕ್ಕೆ 20000 ಸಹಾಯಧನ ಹಸ್ತಾಂತರಿಸಲಾಯಿತು. ನಿರಂತರ ಸಮಾಜಸೇವೆಯಲ್ಲಿ ಗುರುತಿಸಿಕೊಂಡ ಸೇವಾ ತಂಡಗಳನ್ನು ಗೌರವಿಸಲಾಯಿತು. ಪ್ರಶಾಂತ್ ಕುಮಾರ್ ಕಾನ, ವಿಕಾಸ್. ಕೆ. ಬೆಂಗಳೂರು, ರಾಮನಗೌಡ ಸಿ ಗ್ವಾತಗಿ ರಾಮ್ ಫ್ರೆಂಡ್ಸ್ (ರಿ.) ಕಟೀಲು ತಂಡದ ಸ್ಥಾಪಕಾಧ್ಯಕ್ಷರಾದ ರಮಾನಂದ ಪೂಜಾರಿ ಕಟೀಲು ಹಾಗೂ ತಂಡದ ಪದಾಧಿಕಾರಿಗಳು ಮತ್ತು ನಿಸ್ವಾರ್ಥ ಸೇವಾ ಬಂಧುಗಳು ಉಪಸ್ಥಿತರಿದ್ದರು. ತಂಡದ ಅಧ್ಯಕ್ಷರಾದ ಸುಮಂತ್ ಸುವರ್ಣ ಬಡಗಮಿಜಾರು ಅತಿಥಿಗಳನ್ನು ಸ್ವಾಗತಿಸಿದರು. ಕಿರಣ್ ಶೆಟ್ಟಿ ಅತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here