ರಾಮಕೃಷ್ಣ ಮಠ; ಯೋಗ ಶಿಬಿರ ಸಮಾರೋಪ

0
110

ಮಂಗಳೂರು: “ಯೋಗರತ್ನ” ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಮಂಗಳೂರಿನ ಮಂಗಳಾದೇವಿ ಸಮೀಪದ ರಾಮಕೃಷ್ಣ ಮಠದಲ್ಲಿ ಆಗಸ್ಟ್ ತಿಂಗಳ ೨ ವಾರಗಳ ಕಾಲ ಜರುಗಿದ ಯೋಗ ಶಿಬಿರ ಸಮಾರೋಪಗೊಂಡಿತು.
ಯೋಗಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗವನ್ನು ಅಭ್ಯಾಸ ಮಾಡುವುದರಿಂದ ಹಲವಾರು ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಸಮಗ್ರ ಅಭ್ಯಾಸವಾಗಿದೆ. ಇದು ನಮ್ಯತೆ, ಶಕ್ತಿ, ಭಂಗಿ ಮತ್ತು ಸಮತೋಲನವನ್ನು ಸುಧಾರಿಸುತ್ತದೆ, ಜೊತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ, ನಿದ್ರೆಯನ್ನು ಸುಧಾರಿಸುತ್ತದೆ ಮತ್ತು ವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಎಂದರು.
ಈ ಶಿಬಿರದಲ್ಲಿ ವಿಶೇಷವಾಗಿ ಶಿಬಿರಾರ್ಥಿಗಳಿಗೆ ಯೋಗದೊಂದಿಗೆಯೋಗ ಚಕ್ರಗಳ ವರ್ಣಚಿಕಿತ್ಸೆ ಮಂತ್ರ ಮುದ್ರೆಗಳನ್ನು ಕಲಿಸಿ ಕೊಡಲಾಯಿತು. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಏಕಾಗ್ರತೆಗಾಗಿ, ನೆನಪು ಶಕ್ತಿಗಾಗಿ ಉಪಯೋಗವಾಗುವಂತಹ ಮಂತ್ರ– ಮುದ್ರೆಗಳನ್ನು ತಿಳಿಸಿಕೊಡಲಾಯಿತು.
ದೇಲಂಪಾಡಿ ಶಿಷ್ಯರಾದ ಸುಮಾ, ಭಾರತಿ, ಕಾರ್ತಿಕ್, ಚಂದ್ರಹಾಸ ಬಾಳ ಹಾಗೂ ಹರಿಣಿಇವರು ಸಹಕರಿಸಿದರು. ಯೋಗ ತರಬೇತಿ ನೀಡಿದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಶಿಬಿರಾರ್ಥಿಗಳು ಗೌರವಿಸಿದರು.

LEAVE A REPLY

Please enter your comment!
Please enter your name here