ರಾಮಕೃಷ್ಣ ಮಿಷನ್ ಮಂಗಳೂರು –ಅಮೃತಭಕ್ತಿಸುಧಾ ಸಂಗೀತ ಕಾರ್ಯಕ್ರಮ

0
63


• ಕುಮಾರಿ ಮೇಧಾ ವಿದ್ಯಾಭೂಷಣ ಅವರ ಭಕ್ತಿಗೀತೆಗಳು
ರಾಮಕೃಷ್ಣಮಿಷನ್, ಮಂಗಳೂರು ಸಂಸ್ಥೆಯ ಅಮೃತ ವರ್ಷ– 75 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ “ಅಮೃತ ಭಕ್ತಿ ಸುಧಾ” ಎಂಬ ಭಕ್ತಿಗಾಯನ ಕಾರ್ಯಕ್ರಮವನ್ನು ಭಾನುವಾರ, 12 ಅಕ್ಟೋಬರ್ 2025ರಂದು ಸಂಜೆ 5.00ರಿಂದ 7.30ರವರೆಗೆ ಸ್ವಾಮಿ ವಿವೇಕಾನಂದ ಸಭಾಭವನ, ರಾಮಕೃಷ್ಣ ಮಠ, ಮಂಗಳೂರಿನಲ್ಲಿ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಖ್ಯಾತ ಗಾಯಕಿ ಕುಮಾರಿ ಮೇಧಾ ವಿದ್ಯಾಭೂಷಣ ಅವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸಂಗೀತ ಕಾರ್ಯಕ್ರಮದ ಮೊದಲು ಸಂಜೆ 5.00ರಿಂದ 5.30ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯಅ ತಿಥಿ: ಶ್ರೀ ಮಂಜುನಾಥ್ ಬಿ. ಸಿಂಗಾಯಿ, ಪ್ರಧಾನ ವ್ಯವಸ್ಥಾಪಕ (ಸರ್ಕಲ್ ಹೆಡ್), ಕೆನರಾಬ್ಯಾಂಕ್, ಸರ್ಕಲ್‌ಆಫೀಸ್, ಬಲ್ಮಠ, ಮಂಗಳೂರು. ಇವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸ್ವಾಮಿಜಿತಕಾಮಾನಂದಜಿ, ಕಾರ್ಯದರ್ಶಿ, ರಾಮಕೃಷ್ಣ ಮಿಷನ್, ಮಂಗಳೂರು ಅವರು ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್‌ ಗಣೇಶ್‌ ಕಾರ್ನಿಕ್‌ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಂಜೆಯ ಮುಖ್ಯ ಆಕರ್ಷಣೆಯಾಗಿರುವ ಕುಮಾರಿ ಮೇಧಾ ವಿದ್ಯಾಭೂಷಣ ಅವರ ಭಕ್ತಿಗೀತೆಗಳು ಕಾರ್ಯಕ್ರಮದ ಆಧ್ಯಾತ್ಮಿಕ ವಾತಾವರಣವನ್ನು ಮತ್ತಷ್ಟು ಸುಂದರಗೊಳಿಸಲಿದೆ.
ಎಲ್ಲಾ ಭಕ್ತರುಮತ್ತು ಸಾರ್ವಜನಿಕರುಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here