ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ – ನವೆಂಬರ್ ತಿಂಗಳ ಸ್ವಚ್ಛತಾ ಶ್ರಮದಾನ

0
11

ಮಂಗಳೂರು ವೆಸ್ಲಾಕ್ ಆಸ್ಪತ್ರೆಯ ಕಾಂಪೌಂಡ್ ಗೋಡೆಗಳಲ್ಲಿರುವ ಭಿತ್ತಿಚಿತ್ರಗಳ ಸ್ವಚ್ಛತೆ ಮತ್ತು ನವೆಂಬರ್ ತಿಂಗಳ ಸ್ವಚ್ಛತಾ ಶ್ರಮದಾನವನ್ನು ಮುಂಬೈಯ ಹಿರಿಯ ವಕೀಲರಾದ ಸಿ.ಎಂ.ಜಿ. ಗಂಗಾಧರ ಶಾಸ್ತ್ರಿ ಹಾಗೂ ತ್ರಿಷಾ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಕಾಮತ್ ಹಸಿರು ನಿಶಾನೆತೋರಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಂಗಾಧರ ಶಾಸ್ತ್ರಿ ಅವರು, ಸ್ವಚ್ಛ ಮಂಗಳೂರು ಅಭಿಯಾನವು ಸಮಾಜಕ್ಕೆ ಪ್ರೇರಣಾದಾಯಕ ಮತ್ತು ಆದರ್ಶಪ್ರಾಯವಾದ ಕಾರ್ಯಕ್ರಮವಾಗಿದೆ. ಇದು ಭಕ್ತಿ, ಶಿಸ್ತು ಮತ್ತು ಸಮರ್ಪಣೆಯನ್ನು ಸಮರ್ಪಕವಾಗಿ ಸಂಯೋಜಿಸಿಕೊಂಡಿದ್ದು, ನಾಗರಿಕರು ತಮ್ಮ ಸುತ್ತಮುತ್ತಲಿನ ಪರಿಸರದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಪ್ರೇರೇಪಿಸುತ್ತದೆ.

ರಾಮಕೃಷ್ಣ ಮಠದ ಈ ರೀತಿಯ ನಿರಂತರ ಸ್ವಚ್ಛತಾ ಪ್ರಯತ್ನಗಳು ಸಾರ್ವಜನಿಕ ಸ್ಥಳಗಳನ್ನು ಮಾತ್ರವಲ್ಲ, ಮನಸ್ಸುಗಳನ್ನೂ ಶುದ್ಧಗೊಳಿಸುತ್ತವೆ. ನಾಗರಿಕರ ನೈತಿಕ ಜಾಗೃತಿಯನ್ನು ಬೆಳೆಸುತ್ತವೆ” ಎಂದು ಶ್ಲಾಘಿಸಿದರು. ನಂತರ ಮಾತನಾಡಿದ ಪ್ರಾಂಶುಪಾಲ ಮಂಜುನಾಥ ಕಾಮತ್ ಅವರು, “ರಾಮಕೃಷ್ಣ ಮಠ ನಡೆಸುತ್ತಿರುವ ರಾಷ್ಟ್ರಪರ ಸೇವಾ ಕಾರ್ಯದಲ್ಲಿ ಭಾಗಿಯಾಗುವುದು ನಮ್ಮ ಸಂಸ್ಥೆಗೆ ಹೆಮ್ಮೆ. ಮುಂದೆಯೂ ಇದೇ ರೀತಿಯ ಸೇವಾಕಾರ್ಯಗಳಲ್ಲಿ ಸಂಸ್ಥೆ ಸದಾ ಕೈಜೋಡಿಸಲಿರುವುದು” ಎಂದು ತಿಳಿಸಿದರು. ಹಿರಿಯ ಸ್ವಯಂಸೇವಕರಾದ ಕಮಲಾಕ್ಷ ಪೈ ಅವರ ನೇತೃತ್ವದಲ್ಲಿ ದಾಮೋದರ ಭಟ್, ಸುಕುಮಾರ ಸಾಲಿಯಾನ್, ಅನಿರುದ್ಧ ನಾಯಕ್, ಗಣಪತಿ ನಾಯಕ್, ವಿಠಲ ಪ್ರಭು, ರವೀಂದ್ರ ಕಾಮತ್, ನಾಗೇಶ್ ಇವರನ್ನು ಒಳಗೊಂಡ ತಂಡವು ಹಂಪನಕಟ್ಟೆ ವೃತ್ತದವರೆಗಿನ ಡಿವೈಡರ್‌ಗಳಲ್ಲಿದ್ದ ಕಸ ತ್ಯಾಜ್ಯ, ಪ್ಲಾಸ್ಟಿಕ್ ಸೇರಿದಂತೆ ವಿವಿಧ ಮಲಿನಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಸೌರಾಜ್ ಮಂಗಳೂರು, ಯೋಗೀಶ್ ಕಾರ್ಯತಡ್ಕ ಅವರ ನೇತೃತ್ವದಲ್ಲಿ ಸುಬ್ಬಯ್ಯ, ರಮೇಶ್ ಪೈ ಹಾಗೂ ತ್ರಿಷಾ ಕಾಲೇಜಿನ ವಿದ್ಯಾರ್ಥಿಗಳ ತಂಡ ವೆಸ್ಲಾಕ್ ಆಸ್ಪತ್ರೆಯ ಕಾಂಪೌಂಡ್ ಗೋಡೆಗಳ ಮೇಲಿನ ಭಿತ್ತಿಚಿತ್ರಗಳಲ್ಲಿ ಜಮೆಯಾಗಿದ್ದ ಪಾಚಿಯನ್ನು ಸೋಪ್ ನೀರು. ಬ್ರಷ್ ಮತ್ತು ಸ್ಪಾಂಜ್ ಬಳಸಿ ತೊಳೆದು ಮೆರಗು ನೀಡಿದರು. ಅದೇ ರೀತಿ ಉದಯಕುಮಾರ್ ಪಡೀಲ್ ಮತ್ತು ಗೋಪಾಲ ಕೃಷ್ಣ ಭಟ್ ಟ್ಯಾಂಕರ್ ಮೂಲಕ ನೀರು ಹಾಯಿಸಿ, ಫುಟ್ ಪಾತ್ ಮೇಲೆ ಜಮೆಯಾಗಿದ್ದ ಕಸ ಹಾಗೂ ಕಡ್ಡಿಗಳನ್ನು ತೆಗೆದು ಸಂಪೂರ್ಣ ಸ್ವಚ್ಛತೆಯನ್ನು ಮಾಡಿದರು. ರಾಘವೇಂದ್ರ ಮತ್ತು ವಿಜೇಶ್ ದೇವಾಡಿಗ ಈ ಕಾರ್ಯಕ್ರಮಕ್ಕೆ ಸಂಯೋಜಕರಾಗಿ ತಮ್ಮ ಸೇವೆ ಸಲ್ಲಿಸಿದರು.

LEAVE A REPLY

Please enter your comment!
Please enter your name here