ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ – ಸಪ್ಟೆಂಬರ್ ತಿಂಗಳ ಸ್ವಚ್ಛತಾ ಶ್ರಮದಾನ

0
155

• ಮಳೆಗಾಲದ ನಂತರ ಪ್ರಾರಂಭಗೊಂಂಡ ಸೆಪ್ಟೆಂಬರ್ ತಿಂಗಳ ಸ್ವಚ್ಛತಾ ಶ್ರಮದಾನ
• ಸ್ಯಾಕ್ಸೋಫೋನ್‌ಕದ್ರಿ ಗೋಪಾಲನಾಥ ಸ್ಮರಕ ಸ್ವಚ್ಛತೆ
• ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಅಂಗವಾಗಿ ಮಳೆಗಾಲದ ನಂತರ ಪ್ರಾರಂಭಗೊAಡ ಸೆಪ್ಟೆಂಬರ್ ತಿಂಗಳ ಸ್ವಚ್ಛತಾ ಶ್ರಮದಾನ ಭಾನುವಾರಕದ್ರಿ ಮುಖ್ಯದ್ವಾರದ ಸುತ್ತಮುತ್ತಲಿನ ಪರಿಸರದಲ್ಲಿ ಜರುಗಿತು.
ಈ ಶ್ರಮದಾನಕ್ಕೆ ಪಾಲಿಕೆಯ ಮಾಜಿ ಕಾರ್ಪೊರೇಟರ್‌ಗಳಾದ ಪ್ರಕಾಶ್ ಬಿ. ಸಾಲ್ಯಾನ್ ಮತ್ತು ಮನೋಹರ್ ಶೆಟ್ಟಿ ಹಸಿರು ನಿಶಾನೆತೋರಿ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಕಾಶ್ ಬಿ.ಸಾಲ್ಯಾನ್‌ ಅವರು, “ಸ್ವಚ್ಛತಾ ಕಾರ್ಯದಲ್ಲಿ ಸಮುದಾಯದ ಭಾಗವಹಿಸುವಿಕೆ ಅತ್ಯಂತ ಮುಖ್ಯ. ಸ್ವಚ್ಛ ನಗರ ರೂಪಿಸಲು ಪ್ರತಿಯೊಬ್ಬರೂ ತಮ್ಮ ಮನೆಯ ಹಂತದಲ್ಲಿಯೇತ್ಯಾಜ್ಯ ವಿಂಗಡನೆ ಮತ್ತು ಹಸಿಕಸ ನಿರ್ವಹಣೆಯಲ್ಲಿ ಗಮನ ಹರಿಸಬೇಕು. ಇದರಿಂದ ಮಾತ್ರ ಮಂಗಳೂರನ್ನು ಸ್ವಚ್ಛ ಮತ್ತು ಹಸಿರು ಮಾಡುವ ಕನಸು ಸಾಕಾರವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಸ್ವಚ್ಛ ಮಂಗಳೂರು ಅಭಿಯಾನದ ಹಿರಿಯ ಸ್ವಯಂ ಸೇವಕರಾದ ಬಾಲಕೃಷ್ಣ ಭಟ್, ಕೆ.ವಿ. ಸತ್ಯನಾರಾಯಣ, ಶಿವರಾಮ, ಉದಯ್ ಕೆ.ಪಿ., ಸೌರಜ್ ಶೆಟ್ಟಿ ಮಂಗಳೂರು, ಯೋಗೇಶ್‌ ಕಾರ್ಯತಡ್ಕ, ಅವಿನಾಶ್, ಅನಿರುದ್ಧ ನಾಯಕ್, ಡಾ. ಕೃಷ್ಣ ಶರಣ್, ಸುನಂದಾಇವರು ಶ್ರಮದಾನದ ಸಂದರ್ಭದಲ್ಲಿ ರಸ್ತೆ ಮತ್ತು ಅದರ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರ ಕಸದ ಅವಶೇಷಗಳನ್ನು ತೆರವುಗೊಳಿಸಿದರು.
ಅದೇರೀತಿ ದಿಲ್ ರಾಜ್ ಆಳ್ವ, ದೇವಿಪ್ರಸಾದ್ ಮತ್ತು ರಕ್ಷಿತ್‌ ಕದ್ರಿ ನೇತೃತ್ವದ ಮತ್ತೊಂದು ತಂಡ ಮಲ್ಲಿಕಟ್ಟೆ ಪಾರ್ಕ್ ಹಾಗೂ ಶ್ರೀ ಕದ್ರಿ ಗೋಪಾಲನಾಥ್ ಸ್ಮಾರಕದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿತು. ಪ್ಲಾಸ್ಟಿಕ್ ತ್ಯಾಜ್ಯಗಳ ಜೊತೆಗೆ ಗಿಡಗಂಟಿಗಳನ್ನೂ ತೆರವುಗೊಳಿಸಿ ಸುಂದರ ವಾತಾವರಣ ನಿರ್ಮಾಣಕ್ಕೆಕಾರಣರಾದರು. ಇವರೊಂದಿಗೆ ನಿಟ್ಟೆಇನ್ಸ್ಟಿಟ್ಯೂಟ್‌ ಆಫ್ ಫಿಸಿಯೋಥೆರಪಿಯ ಪ್ರಾಧ್ಯಾಪಕರಾದ ಡಾ. ರಾಕೇಶ್‌ಕೃಷ್ಣ, ಡಾ. ರುಚಿತಾ ನಾರ್ಸಿಯ ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.
ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದೊಂದಿಗೆ ಸ್ಥಳೀಯ ಸಂಘಟನೆಗಳಾದ ಯುವ ಫ್ರೆಂಡ್ಸ್ ಕದ್ರಿ ಮತ್ತುಕದ್ರಿ ಯೂತ್ ಫ್ರೆಂಡ್ಸ್ ಪ್ರತಿನಿಧಿಗಳು ಈ ಶ್ರಮದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಈ ರೀತಿಯ ಸಮೂಹ ಪ್ರಯತ್ನಗಳ ಮೂಲಕ ಮಂಗಳೂರು ನಗರದಲ್ಲಿ ಶಾಶ್ವತ ಸ್ವಚ್ಛತೆ ಮತ್ತು ಹಸಿರು ಪರಿಸರವನ್ನು ಬೆಳೆಸುವ ದಾರಿಯಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ನಿರಂತರವಾಗಿ ಜನರನ್ನು ಪ್ರೇರೇಪಿಸುತ್ತಿದೆ.

ಸ್ಯಾಕ್ಸೋಫೋನ್‌ ಕದ್ರಿ ಗೋಪಾಲನಾಥ ಸ್ಮರಕ ಸ್ವಚ್ಛತೆ:
ಖ್ಯಾತ ಸ್ಯಾಕ್ಸೋಫೋನ್ ವಾದಕರಾದ ಕದ್ರಿ ಗೋಪಾಲನಾಥ ಅವರ ಸ್ಮಾರಕದಲ್ಲಿದ್ದ ಧೂಳು, ಕಸ ಹಾಗೂ ಅಶುಚಿತ್ವವನ್ನು ನಿವಾರಿಸಲು ಸ್ವಚ್ಛತಾ ಶ್ರಮದಾನ ಸಂದರ್ಭದಲ್ಲಿ ವಿಶೇಷ ಪ್ರಯತ್ನ ನಡೆಸಲಾಯಿತು. ಸ್ಮಾರಕದ ಸುತ್ತಮುತ್ತಲಿನ ಪ್ರದೇಶ ಬಹಳ ಮಲಿನವಾದಕಾರಣ ನೀರಿನ ಟ್ಯಾಂಕ್‌ನ್ನು ತರಿಸಿ ಸಂಪೂರ್ಣ ತೊಳೆಯುವ ಕಾರ್ಯ ನಡೆಯಿತು. ಸ್ವಯಂಸೇವಕರು ಶ್ರಮವಹಿಸಿ ಸ್ಮಾರಕವನ್ನು ಸಂಪೂರ್ಣವಾಗಿ ಶುದ್ಧಗೊಳಿಸಿದರು. ಈ ಮೂಲಕ ಕದ್ರಿ ಗೋಪಾಲನಾಥರ ಸಂಗೀತ ಪರಂಪರೆಗೆ ತಕ್ಕ ಗೌರವ ತೋರಿಸುವ ಕೆಲಸವನ್ನು ಸ್ವಚ್ಛತೆಯ ಮೂಲಕ ನೆರವೇರಿಸಿದರು.

LEAVE A REPLY

Please enter your comment!
Please enter your name here