ರಾಮಕೃಷ್ಣ ಮಿಷನ್ : ಸ್ವಚ್ಛ ಮಂಗಳೂರು ಅಭಿಯಾನ – ಮಾಸಿಕ ಸ್ವಚ್ಛತಾ ಶ್ರಮದಾನ

0
20

ರಾಮಕೃಷ್ಣ ಮಿಷನ್–ಸ್ವಚ್ಛಮಂಗಳೂರು ಅಭಿಯಾನದ ಮಾರ್ಚ್ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ ಹಾಗೂ ಕೆನಡಾ ಓಂಟಾರಿಯೊ ಸರ್ಕಾರದ ಆರ್ಥಿಕ ತಜ್ಞ ಪ್ರಾಂಜಲ್‌ ಘಾಟೆ ಅವರು ಅಧಿಕೃತವಾಗಿ ಚಾಲನೆನೀಡಿದರು.

ಈ ಸಂದರ್ಭದಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಹಾಗೂ ಸ್ವಚ್ಛ ಮಂಗಳೂರು ಸಂಯೋಜಕರಾದ ರಂಜನ್‌ ಬೆಳ್ಳರ್ಪಾಡಿ ಅವರು ಉಪಸ್ಥಿತರಿದ್ಧರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಾಂಜಲ್‌ಘಾಟೆ, “ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಕೆಲಸ ಮಾಡುವ ಅನುಭವದಿಂದ ಸ್ವಚ್ಛತೆಯ ಮಹತ್ವವನ್ನು ನಾನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೇನೆ. ರಾಮಕೃಷ್ಣ ಮಿಷನ್‌ನ ನೇತೃತ್ವದಲ್ಲಿ ನಡೆಯುತ್ತಿರುವ ಈ ಸ್ವಚ್ಛತಾಅಭಿಯಾನದಲ್ಲಿ ತೊಡಗಿರುವ ಸ್ವಯಂಸೇವಕರು ಹಾಗೂ ಮಂಗಳೂರು ನಾಗರಿಕರ ಸಮರ್ಪಿತ ಪ್ರಯತ್ನವನ್ನು ನಾನು ಹೃತ್ಪೂರ್ವಕವಾಗಿ ಮೆಚ್ಚುತ್ತೇನೆ” ಎಂದು ಹೇಳಿದರು.

ಶ್ರಮದಾನ ಚಟುವಟಿಕೆಗಳ ಭಾಗವಾಗಿ, ಬಾಲಕೃಷ್ಣ ಭಟ್, ಅನಿರುದ್ಧ ನಾಯಕ್, ಪ್ರಕಾಶ್, ರಾಮಚಂದ್ರ ಭಟ್, ಗಂಗಾಧರ ಶಾಸ್ತ್ರಿ, ಪದ್ಮನಾಭ ಸಾಲಿಯನ್, ಅವಿನಾಶ್, ಬಬಿತಾ ಶೆಟ್ಟಿ, ರಾಜೀವಿ ಚಂದ್ರಶೇಖರ್, ಸುಕುಮಾರ್ ಸಾಲಿಯನ್ ಹಾಗೂ ಇತರ ಹಿರಿಯ ಸ್ವಯಂಸೇವಕರು ಕದ್ರಿದೇವಸ್ಥಾನದ ಪಾರ್ಕಿಂಗ್ ಪ್ರದೇಶದಲ್ಲಿ ಸ್ವಚ್ಛತಾಕಾರ್ಯ ನಡೆಸಿದರು. ಕಸವನ್ನು ತೆರವುಗೊಳಿಸುವುದರ ಜೊತೆಗೆಅಸಮರ್ಪಕ ಬ್ಯಾರಿಕೇಡ್‌ಗಳು ಮತ್ತುಅನಗತ್ಯ ಫಲಕಗಳನ್ನು ತೆರವುಗೊಳಿಸಿ, ಪಾರ್ಕಿಂಗ್ ಸಿಬ್ಬಂದಿಗೆ ಜಾಗೃತಿ ಮೂಡಿಸಿದರು. ಅಲ್ಲದೆ, ಭೇಟಿ ನೀಡು ಭಕ್ತರು ಲಭ್ಯವಿರುವಕಸದ ಬುಟ್ಟಿಗಳನ್ನು ಸರಿಯಾಗಿ ಬಳಸುವಂತೆ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪ್ರೇರೇಪಿಸಿದರು.

ಕದ್ರಿದೇವಸ್ಥಾನದ ಮುಖ್ಯರಸ್ತೆಯಲ್ಲಿ ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯಉಪನ್ಯಾಸಕರಾದಡಾ. ಪುರುಷೋತ್ತಮನ್‌ಚಿಪ್ಪಾಲ, ಡಾ. ಜಯೇಶ್‌ಚಂದ್ರನ್, ಡಾ. ರುಚಿತಾ, ಡಾ. ಹೇಮಂತ್ ಹಾಗೂ ಸೋಕ್ರಟೀಸ್‌ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಸ್ವಯಂಸೇವಕರತAಡವು ಸ್ವಚ್ಛತಾಕಾರ್ಯಕೈಗೊಂಡಿತು. ಈ ತಂಡವುರಸ್ತೆಯ ಇಕ್ಕೆಲಗಳಲ್ಲಿ ಜಮೆಗೊಂಡಕಸವನ್ನು ತೆರವುಗೊಳಿಸಿ, ಮರುಬಳಕೆ ಸಾಧ್ಯವಿಲ್ಲದ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ, ಅನಧಿಕೃತ ಬ್ಯಾನರ್‌ಗಳನ್ನು ತೆಗೆದುಹಾಕಿದರು.

ಈ ಮಾಸಿಕ ಸ್ವಚ್ಛತಾಅಭಿಯಾನದಲ್ಲಿ ಸಾರ್ವಜನಿಕರು ಸ್ವಯಂಸೇವಕರಾಗಿ ಭಾಗವಹಿಸಲು ಆಹ್ವಾನಿಸಲಾಗುತ್ತದೆ. ಈ ಅಭಿಯಾನವು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ ಮುನ್ನಡೆಯುತ್ತಿದೆ ಮತ್ತು ಪರಿಸರ ಸಂಬಂಧಿತ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿಎಂಆರ್‌ಪಿಎಲ್ ಸಂಸ್ಥೆಯ ಬೆಂಬಲವನ್ನು ಹೊಂದಿದೆ.

ಧಾರ್ಮಿಕ ತ್ಯಾಜ್ಯಗಳ ಸಂಗ್ರಹ

ವಿಶೇಷ ಉಪಕ್ರಮದ ಭಾಗವಾಗಿ, ತಾರಾನಾಥ ಆಳ್ವ, ಕಮಲಾಕ್ಷ ಪೈ, ದಿಲ್ರಾಜ್ ಆಳ್ವ, ಸಚಿನ್ ಶೆಟ್ಟಿ, ಭವಿತ್ ಸಾಲಿಯನ್, ವರುಣ್, ಗಗನ್, ಯಲ್ಲಪ್ಪ, ಮಂಜುನಾಥ್ ಸೇರಿದಂತೆಇತರ ವಿದ್ಯಾರ್ಥಿ ಸ್ವಯಂಸೇವಕರುಕದ್ರಿ ವೃತ್ತದಲ್ಲಿ ಜಮೆಗೊಂಡಿದ್ದ ಧಾರ್ಮಿಕ ತ್ಯಾಜ್ಯಗಳನ್ನು ಸಂಗ್ರಹಿಸುವ ಕಾರ್ಯಕೈಗೊಂಡರು. ಇದರಲ್ಲಿ ಹಿಂದು ದೇವತೆಗಳ ಚಿತ್ರಪಟಗಳು ಹಾಗೂ ಮೂರ್ತಿಗಳು ಸೇರಿದ್ದವು. ಇವುಗಳ ಸಾಂಸ್ಕೃತಿಕ ಮತ್ತುಆಧ್ಯಾತ್ಮಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸ್ವಯಂಸೇವಕರು ಅವುಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿದರು. ಈ ತ್ಯಾಜ್ಯಗಳನ್ನು ಮುಂದಿನ ದಿನಗಳಲ್ಲಿ ಸ್ವಚ್ಛ ಮಂಗಳೂರು ತಂಡವು ವಿಶೇಷಅಭಿಯಾನದ ಮೂಲಕ ಗೌರವಪೂರ್ವಕವಾಗಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುವುದು.

LEAVE A REPLY

Please enter your comment!
Please enter your name here