ಮೂಡು ಮಾರ್ನಾಡು ಗ್ರಾಮದ ರಮೇಶ್ ಆತ್ಮಹತ್ಯೆ

0
73

ಮೂಡುಬಿದಿರೆ ತಾಲೂಕಿನ ಮೂಡು ಮಾರ್ನಾಡು ಗ್ರಾಮದ ತಿರುಮಲೊಟ್ಟು ಮನೆಯಲ್ಲಿ ವಾಸವಿದ್ದ 38 ವರ್ಷದ ರಮೇಶ್ ಎನ್ನುವಾತ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ತಿಳಿದು ಬಂದಿದೆ.

ಮೃತ ರಮೇಶ್ ಅವರು ಇತ್ತೀಚಿನ ದಿನಗಳಲ್ಲಿ ತೀವ್ರವಾದ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ಇದೇ ಕಾರಣಕ್ಕೆ ಅವರು ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತರು ಪತ್ನಿ ಹಾಗೂ ಎರಡೂವರೆ ವರ್ಷದ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here