ಬಂಟ್ವಾಳ : ಅಖಿಲ ಭಾರತ ಮಟ್ಟದ ಜೆ ಇ ಇ ಪರೀಕ್ಷೆಯಲ್ಲಿ 34ನೇ ರ್ಯಾಂಕ್ ಗಳಿಸಿ ಡೆಲ್ಲಿ ಐಐಟಿಯಲ್ಲಿ ಪ್ರವೇಶ ಪಡೆದ ಪ್ರತಿಭಾವಂತ ಪುಟ್ಟ ಹಾಗೂ ವಿನುತಾ ದಂಪತಿಗಳ ಪುತ್ರ ಪೂಜಿತ್ ಕುಲಾಲ್ ರವರನ್ನು ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ವತಿಯಿಂದ ಅಧ್ಯಕ್ಷರಾದ ಸೋಮಯ್ಯ ಹನೈನಡೆ ನೇತೃತ್ವದಲ್ಲಿ ಶಾಲು ಸ್ಮರಣಿಕೆ ಫಲ ಪುಷ್ಪ ನೀಡಿ ಹಾರ ಹಾಕಿ ಸನ್ಮಾನಿಸಿ ಸಹಾಯ ಧನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು ಇಂತಹ ಪ್ರತಿಭಾವಂತ ಬಾಲಕರನ್ನು ಗುರುತಿಸಿ ಸನ್ಮಾನಿಸುವುದು ನಮ್ಮ ಸಂಘಕ್ಕೆ ಹೆಮ್ಮೆ ಹಾಗೂ ಆತನಿಗೆ ಮುಂದಿನ ಭವಿಷ್ಯಕ್ಕೆ ಸ್ಫೂರ್ತಿ ಎಂದು ಅಭಿಪ್ರಾಯಪಟ್ಟು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸೋಮಪ್ಪ ಬಂಗೇರ, ಶ್ರೀನಿವಾಸ ಕುಲಾಲ್, ರೋಹಿಣಿ, ಶೀನ ಟೈಲರ್ ಅಲ್ಲಿಪ್ಪಾದೆ, ಕಿಟ್ಟು ಮೂಲ್ಯ, ನೀಲಪ್ಪ ಸಾಲಿಯಾನ್, ರತ್ನಾವತಿ, ವಿಠ್ಠಲ ಮೂಲ್ಯ, ದಿನಕರ ಎಂ., ರಾಮ ಮರ್ದೋಳಿ, ಶಾಂಭವಿ ಹಾಗೂ ಸದಸ್ಯರಾದ ಭಾಸ್ಕರ್ ಕೊಲ್ನಾಡು ,ಗುಣವತಿ ಮತ್ತು ಬಾಲಕನ ತಾಯಿ ವಿನುತಾ ಉಪಸ್ಥಿತರಿದ್ದರು. ಗೌರವಾಧ್ಯಕ್ಸರಾದ ಶೇಷಪ್ಪ ಮಾಸ್ಟರ್ ನಿರ್ವಹಿಸಿದರು.