ಸೆಪ್ಟೆಂಬರ್ 25 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಅದ್ದೂರಿ ಮಡಿಕೇರಿ ದಸರಾ ಕವಿಗೋಷ್ಠಿಯು ನಡೆದಿದ್ದು ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ಘಟಕದ ಅಧ್ಯಕ್ಷೆಯಾದ ಶ್ರೀಮತಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಆಯ್ಕೆಯಾಗಿ ಕವನ ವಾಚನ ಮಾಡಿರುತ್ತಾರೆ. ಇವರು ಪ್ರಸ್ತುತ ಅಕ್ಷಯ ಪದವಿ ಕಾಲೇಜು ಪುತ್ತೂರು ಇಲ್ಲಿ ಭಾಷಾ ಪ್ರಾಧ್ಯಾಪಕಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

