ಅಂತರ್ ರಾಜ್ಯ ಮಟ್ಟದಲ್ಲಿ ಲೇಖನ, ಪ್ರಬಂಧ, ಕಥೆ ಸೇರಿದಂತೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಂಚ ಭಾಷೆಗಳಲ್ಲಿ ಬರಹದ ಮೂಲಕ ಹಲವಾರು ಬಹುಮಾನಗಳನ್ನು ಪಡೆದ ಸಾಧಕಿ, ತಾಳಮದ್ದಳೆ ಅರ್ಥಗಾರಿಕೆ, ಆಲ್ಬಮ್ ಸಾಂಗ್ ಗಳಲ್ಲಿ ನಟಿಸಿ, ನಾಟಕ ರಚನೆ ಮತ್ತು ಅಭಿನಯ ದೊಂದಿಗೆ ನಿರೂಪಣೆಯಲ್ಲಿಯೂ ಈಗಾಗಲೇ ಹಲವು ಪ್ರಶಸ್ತಿಗಳನ್ನು ಮತ್ತು ಸಮ್ಮಾನಗಳನ್ನು ಪಡೆದಿರುವ ಬಹುಮುಖ ಪ್ರತಿಭೆಯಾದ ರಶ್ಮಿತಾ ಸುರೇಶ್ ಜೋಗಿಬೆಟ್ಟು ಇವರು ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ) ಕರ್ನಾಟಕ ಇವರು ಸಾಧಕರಿಗೆ ಕೊಡ ಮಾಡುವ ಕಿತ್ತೂರು ರಾಣಿ ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಅಕ್ಷಯ ಪದವಿ ಕಾಲೇಜು ಪುತ್ತೂರು ಇಲ್ಲಿ ಭಾಷಾ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತ್ತು ಪ್ರಸ್ತುತ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ಬಂಟ್ವಾಳ ತಾಲೂಕು ಅಧ್ಯಕ್ಷೆಯಾಗಿದ್ದಾರೆ.