ದೇಶಾದ್ಯಂತ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ಸಾಕ್ಷರತಾ ಸಪ್ತಾಹ (FLW) ಕಾರ್ಯಕ್ರಮವು ಫೆ 9 ರಿಂದ 13 ರ ವರೆಗೆ ನಡೆಯಲಿದೆ ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಯಶಸ್ವಿಯಾಗಿ ಹಣಕಾಸು ಸಾಕ್ಷರತಾ ಸಪ್ತಾಹದ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಯರಾಮ್, ಕಾರ್ಯಕ್ರಮ ನಿರ್ದೇಶಕರು, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ, ಕವಿತಾ ಎನ್. ಶೆಟ್ಟಿ, LDCM, ದಕ್ಷಿಣ ಕನ್ನಡ ಜಿಲ್ಲೆ, ಮತ್ತು ಹರಿಪ್ರಸಾದ್, DPM, NRLM ಕೆನರಾ ಬ್ಯಾಂಕ್ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಲತೇಶ್ ಬಿ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭಾಗವಹಿಸಿದವರಿಗೆ KYC ಹಾಗೂ CKYC ಪ್ರಕ್ರಿಯೆ, ಮನಿ ಮ್ಯೂಲ್ ಖಾತೆಗಳು, ಹಾಗೂ ಸುರಕ್ಷಿತ ಮತ್ತು ಜವಾಬ್ದಾರಿಯುತ ಬ್ಯಾಂಕಿಂಗ್ ಅಭ್ಯಾಸಗಳ ಮಹತ್ವ ಕುರಿತು ಅರಿವು ಮೂಡಿಸಲಾಯಿತು. ನಿಯಮಿತವಾಗಿ KYC ನವೀಕರಣ ಮಾಡುವ ಅಗತ್ಯತೆ, ಬ್ಯಾಂಕ್ ಖಾತೆಗಳ ದುರುಪಯೋಗವನ್ನು ತಪ್ಪಿಸುವುದು ಹಾಗೂ ಹಣಕಾಸು ಮೋಸಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂಬುದನ್ನು ವಕ್ತಾರರು ತಿಳಿಸಿದರು.
ಕಾರ್ಯಕ್ರಮದ ಭಾಗವಾಗಿ ಹಣಕಾಸು ಸಾಕ್ಷರತಾ ಸಪ್ತಾಹದ ಪೋಸ್ಟರ್‌ಗಳನ್ನು ಪ್ರದರ್ಶಿಸಿ ಜನಜಾಗೃತಿ ಮೂಡಿಸಲಾಯಿತು.

