‘ಹೋಟೆಲ್‌ನಲ್ಲಿ ಬಾಲಕಿ ಮೇಲೆ ಆರ್‌ಸಿಬಿ ಸ್ಟಾರ್ ಬೌಲರ್ ಯಶ್ ದಯಾಳ್ ಲೈಂಗಿಕ ದೌರ್ಜನ್ಯ’ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಮೊದಲ ಟ್ರೋಫಿಗೆ ಮುತ್ತಿಟ್ಟಿತು. ಈ ಸಲ ಕಪ್ ನಮ್ದು ಎಂದಾದ ಮೇಲೆ ತಂಡಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಆಘಾತಗಳು ಎದುರಾಗುತ್ತಲಿದೆ. ಇದೀಗ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿರುವ ಯಶ್ ದಯಾಳ್ ಮೇಲೆ ಮತ್ತೊಂದು ಗಂಭೀರ ಆರೋಪವೊಂದು ಕೇಳಿಬಂದಿದ್ದು, ಅರೆಸ್ಟ್ ಆಗುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ಟೀಂನಿಂದಲೂ ಹೊರಬೀಳುವ ಎಲ್ಲಾ ಲಕ್ಷಣಗಳು ಎದ್ದುಕಾಣುತ್ತಿವೆ.
ಅದೇನೋ ಗೊತ್ತಿಲ್ಲ.. ಟ್ರೋಫಿ ಗೆದ್ದಿದ್ದೇ ಗೆದ್ದಿದ್ದು ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತಗಳ ಸರಮಾಲೆಯೇ ಎದುರಾಗುತ್ತಿವೆ. ಐಪಿಎಲ್ 18ನೇ ಆವೃತ್ತಿಯ ಫೈನಲ್ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ವೇಳೆ ಆರ್‌ಸಿಬಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಬಳಿಕ ತುಂಬಾ ಬೆಳವಣಿಗಳು ಆದ್ವು.. ಈಗಲೂ ಆಗುತ್ತಲಿವೆ.ರಾಯಲ್ ಚಾಲೆಂಜರ್ಸ್ ಟ್ರೊಫಿ ಗೆಲುವಿಗೆ ಪ್ರಮುಖ ಕಾರಣಕರ್ತನಾದ ಸ್ಟಾರ್ ಬೌಲರ್ ಯಶ್ ದಯಾಲ್ ವಿರುದ್ಧ ಸಂತ್ರಸ್ತೆಯೊಬ್ಬರು ಲೈಕಿಂಗ ಕಿರುಕುಳ ಆರೋಪ ಮಾಡಿದ್ದರು. ಇದೀಗ ಮತ್ತೊಬ್ಬ ಸಂತ್ರಸ್ತೆ ಕೂಡ ಅವರ ಮೇಲೆ ಇದೇ ಆರೋಪ ಮಾಡಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ. ಹೌದು..ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಮಾರಕ ಬೌಲರ್ ಯಶ್ ದಯಾಳ್ ವಿರುದ್ಧ ಮತ್ತೊಬ್ಬ ಹುಡುಗಿ ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾಳೆ. ಗಾಜಿಯಾಬಾದ್ ಬಳಿಕ ಜೈಪುರದಲ್ಲಿಯೂ ಯಶ್ ದಯಾಳ್ ವಿರುದ್ಧ ಎಫ್‌ಐಆರ್ ದಾಖಲಿ ಆಗಿದೆ.