ಸ್ಥಳೀಯ ತಾರಬರಿ ಸನ್ನಿಧಾನದಲ್ಲಿ ಏಪ್ರಿಲ್ 2026ರಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾಡಿಕೆಯಂತೆ ನಡೆಯುವ ವಾರ್ಷಿಕ ತಾರಬರಿ ಬಂಡಿ ಉತ್ಸವವು ಭಕ್ತಿಭಾವದಿಂದ ನಡೆಯಲಿದೆ.
ಕಾರ್ಯಕ್ರಮದ ವಿವರಗಳು ಹೀಗಿವೆ :
ಏಪ್ರಿಲ್ 7, 2026 (ಮಂಗಳವಾರ) ವಾಸ್ತುಪೂಜೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ದೊರೆಯಲಿದೆ.
ಏಪ್ರಿಲ್ 8, 2026 (ಬುಧವಾರ) ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ಹೊರೆಕಾಣಿಕೆ ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್ 9, 2026 (ಗುರುವಾರ) ಶ್ರೀ ದೈವಗಳ ಭಂಡಾರ ತಾರಬರಿ ಸನ್ನಿಧಾನಕ್ಕೆ ಆಗಮನಗೊಳ್ಳಲಿದೆ.
ಮುಖ್ಯ ಕಾರ್ಯಕ್ರಮವಾಗಿ ಏಪ್ರಿಲ್ 10, 2026 (ಶುಕ್ರವಾರ) ಪ್ರಾತಃಕಾಲ 7.40ಕ್ಕೆ ವೃಷಭ ಲಗ್ನದ ಸುಮುಹೂರ್ತದಲ್ಲಿ ಶ್ರೀ ಧೂಮಾವತಿ – ಧೂಮಾವತಿ ಬಂಟ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಭಕ್ತಿಪೂರ್ವಕವಾಗಿ ನಡೆಯಲಿದೆ. ಈ ದಿನ ಜುಮಾದಿ – ಜುಮಾದಿ ಬಂಟ ದೈವಗಳ ಮಾಣ್ಯೆಚ್ಚಿಲ್, ಪಲ್ಲಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ಜುಮಾದಿ – ಜುಮಾದಿ ಬಂಟ ದೈವಗಳ ನೇಮೋತ್ಸವ ಜರುಗಲಿದೆ.
ವಾಡಿಕೆಯಂತೆ ನಡೆಯುವ ವಾರ್ಷಿಕ ತಾರಬರಿ ಬಂಡಿ ಉತ್ಸವದ ಅಂಗವಾಗಿ,
ಏಪ್ರಿಲ್ 14, 2026 (ಮಂಗಳವಾರ) ರಾತ್ರಿ ಸನ್ನಿಧಿಗೆ ಭಂಡಾರ ಆಗಮನ, ತುಡರಬಲಿ ಹಾಗೂ ಧ್ವಜಾರೋಹಣ ನಡೆಯಲಿದೆ.
ಏಪ್ರಿಲ್ 15, 2026 (ಬುಧವಾರ) ವಾರ್ಷಿಕ ತಾರಬರಿ ಬಂಡಿ ಉತ್ಸವವು ಸಂಪ್ರದಾಯಬದ್ಧವಾಗಿ ಜರುಗಲಿದೆ.
ಏಪ್ರಿಲ್ 16, 2026 (ಗುರುವಾರ) ಸಾಯಂಕಾಲ ಜಾರಂದಾಯ – ಬಂಟ, ಪಿಲಿಚಂಡಿ ಸಪರಿವಾರ ದೈವಗಳ ಕಟ್ಟು–ಕಟ್ಟಳೆ ನೇಮ, ತುಡರಬಲಿ, ಧ್ವಜಾವರೋಹಣದೊಂದಿಗೆ ಭಂಡಾರ ಮನೆಗೆ ಭಂಡಾರ ನಿರ್ಗಮನ ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಗಳ ಕೃಪೆಗೆ ಪಾತ್ರರಾಗುವಂತೆ ತಾರಬರಿ ಸನ್ನಿಧಾನದ ಆಡಳಿತ ಮಂಡಳಿ ಹಾಗೂ ಉತ್ಸವ ಸಮಿತಿ ವಿನಂತಿಸಿದೆ.
