ಸಂವಿಧಾನ ಪೀಠಿಕೆಯ ತುಳು ಓದು

0
11

ಮಂಗಳೂರು : ಭಾರತ ಸಂವಿಧಾನದ ಪೀಠಿಕೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಭಾಷೆಗೆ ಭಾಷಾಂತರಿಸಿ ಪಠ್ಯದ ಫಲಕ ಬಿಡುಗಡೆ ಮಾಡಿದೆ.
ನವೆಂಬರ್ 26ರ ಸಂವಿಧಾನ ದಿನ ಕಾರ್ಯಕ್ರಮದ ಬಳಿಕ ಮಂಗಳೂರಿನ ವಿವಿಧ ಕೇಂದ್ರಗಳಲ್ಲಿ ಸಂವಿಧಾನ ಪೀಠಿಕೆಯನ್ನು ತುಳುವಿನಲ್ಲಿ ಓದುವ ಅಭಿಯಾನ ನಡೆಯಲಿದೆ.
ಸಂವಿಧಾನದ ಉದಾತ್ತ ಮೌಲ್ಯವನ್ನು ಪ್ರಾದೇಶಿಕ ಭಾಷೆಯ ಮೂಲಕ ತಳಮಟ್ಟದಲ್ಲಿ ಪಸರಿಸುವ ಆಶಯ ಹಾಗೂ ಪ್ರಾದೇಶಿಕ ಭಾಷೆಗಳ ಮೂಲಕ ಸಂವಿಧಾನದ ಸಮಗ್ರತೆಯನ್ನು ಅರ್ಥೈಸಿಕೊಳ್ಳುವ ಮತ್ತು ಅನುಷ್ಠಾನ ಮಾಡುವ ಸಂಕಲ್ಪದ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here