ಮೊಬೈಲ್ ಬಳಕೆ ತಗ್ಗಿಸಿ, ಅಧ್ಯಯನದ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಿ- ರಾಯಿ ರಾಜಕುಮಾರ

0
134

ಪಾಲಡ್ಕ ಸಂತ ಇಗ್ನೇಷಿಯಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ, ಪಾಲಕರ ಸಭೆ ಜೂನ್ 27 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಪತ್ರಿಕಾ ವರದಿಗಾರ ರಾಯಿ ರಾಜಕುಮಾರ ಮೂಡುಬಿದಿರೆಯವರು ಆಗಮಿಸಿದ್ದರು. ಅವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ, ಫಾಸ್ಟ್ ಫುಡ್ ಬಿಟ್ಟು ಆರೋಗ್ಯಕರ ಮನೆಯ ಆಹಾರವನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಲು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು, ತಿನ್ನುವ ತಿನಿಸುಗಳನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಬಿಸಾಡಿ ಏನೂ ತಿಳಿಯದ ಪಕ್ಷಿ, ಪ್ರಾಣಿಗಳ ಹತ್ಯೆಗೆ ಕಾರಣರಾಗದಂತೆ ಪರಿಸರ ಪ್ರೇಮಿಯಾಗಲು ಕೇಳಿಕೊಂಡರು. ಮೊಬೈಲ್ ನಲ್ಲಿ ಕಳೆದು ಹೋಗದೇ ಜ್ಙಾನವನ್ನು ಹೆಚ್ಚಿಸಿಕೊಳ್ಳಲು, ಒಂದು ವೇಳೆ ಅಂಕ ಕಡಿಮೆ ಬಂದರೂ ಎದೆಗುಂದದೆ ಡಿಪ್ಲೊಮಾ, ಪಾರಾ ಮೆಡಿಕಲ್ ನ ವೈವಿಧ್ಯಮಯ ಕೋರ್ಸ್ ಕಲಿತು ಇತರರಿಗಿಂತ ಬೇಗ ಉದ್ಯೋಗ ಪಡೆಯಲು ಸಾಧ್ಯ ಎಂದು ಹಲವಾರು ಉದಾಹರಣೆಗಳೊಂದಿಗೆ ವಿವರಿಸಿದರು.
ಅತಿ ವಂದನೀಯ ಇಲ್ಯಾಸ್ ಡಿ ಸೋಜ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು. ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಸಿಕ್ವೇರಾ ಶಾಲಾ ನಿಯಮಗಳನ್ನು ಪ್ರಕಟಿಸಿದರು. ಶಿಕ್ಷಕಿ ಸುನೀತಾ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಪಾಲನಾ ಸಮಿತಿಯ ರೊನಾಲ್ಡ ಲೋಬೋ, ಮೈಕೆಲ್ ಸಿಕ್ವೇರಾ, ಓಸ್ವಾಲ್ಡ್ ಪಿಂಟೋ, ಅನ್ಸಿಲ್ಲಾ ಮೆಟಿಲ್ಡಾ ಕರ್ಡೋಸಾ, ರೆನಿಟಾ ಸೆರಾವೋ, ಸೆಟುರ್ನೈನ್ ಡಿ ಸಿಲ್ವಾ ಹಾಜರಿದ್ದರು.

LEAVE A REPLY

Please enter your comment!
Please enter your name here