ಹೆಬ್ರಿ, ಅ.16: ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪುನಶ್ವೇತನ ಕಾರ್ಯಾಗಾರ ನಡೆಯಿತು. ಅಮ್ಮತಭಾರತಿ ವಿದ್ಯಾಲಯದ ಅಧ್ಯಕ್ಷರಾದ ಶೈಲೇಶ್ ಕಿಣಿ ಕಾರ್ಯಾಗಾರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಗುರಿಯನ್ನು ಸಾಧಿಸಲು ಕಠಿಣ ಶ್ರಮ ನಿರಂತರ ಪ್ರಯತ್ನ ಅಗತ್ಯ.
ವಿದ್ಯಾರ್ಥಿ ಜೀವನದಲ್ಲಿ ಸುಖವನ್ನು ಅನುಭವಿಸದೆ ಏಕಾಗ್ರತೆಯನ್ನು ಹೊಂದಿ ಓದಿದಾಗ ಗುರಿ ತಲುಪಲು ಸಾಧ್ಯ ಪ್ರತಿನಿತ್ಯ ಸಮಯಸಾರಿಣಿಯ ಮೂಲಕ ಸಮಯದ ಸದುಪಯೋಗ ಪಡೆದುಕೊಳ್ಳಬೇಕು ಅಲ್ಲದೆ ಉತ್ತಮ ಗುರು ಮತ್ತು ಗುರಿ ನಿಮ್ಮದಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥೆ ಅವರ್ಣಾ ಆಚಾರ್ ಹಾಗೂ ಗುರುವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಕೃತ ಶಿಕ್ಷಕ ವಿದ್ಯಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಸ್ವಾಗತಿಸಿ ವಂದಿಸಿದರು.