ಮುಲ್ಕಿ: ಇಲ್ಲಿಗೆ ಸಮೀಪದ ದೇಂದಡ್ಕ ಪುತ್ತೂರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2026ರ ಮಾರ್ಚ್ 21ರಿಂದ 25ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ವಿಜ್ಞಾಪನೆ ಪತ್ರ ಬಿಡುಗಡೆ ನೆರವೇರಿತು.
ದೇಗುಲದ ತಂತ್ರಿಗಳಾದ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳು, ಪ್ರಧಾನ ಅನುವಂಶಿಕ ಅರ್ಚಕ ಷಿ ಸುಬ್ರಹ್ಮಣ್ಯ ಭಟ್ ದೇಶದಡ್ಕ ಗುತ್ತಿನಾರ್, ಸುಧಾಕರ ಶೆಟ್ಟಿ ದೆಪ್ಪುಣಿಗುತ್ತು, ಅನುವಂಶಿಕ ಮೊಕ್ತೇಸರರಾದ ರತ್ನಾವತಿ ಎಸ್. ಶೆಟ್ಟಿ ಮತ್ತು ಶೈಲೇಶ್ ಹೆಗ್ಡೆ ದೇಂದಡ್ಡ ಮನೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರಮೋದ್ ಪುಟ್ಟಣ್ಣ ಶೆಟ್ಟಿ ದೇಂದಯ್ಯ ಪ್ರಧಾನ ಜನಾನಂದ ಕಾರ್ಯದರ್ಶಿಗಳಾದ ಶೆಟ್ಟಿ ತಿಂಗೋಳೆ, ಕಾರ್ಯದರ್ಶಿಗಳಾದ ಗಂಗಾಧರ ಶೆಟ್ಟಿ ಬೆರ್ಕೆತೋಟ, ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ ಜತೆ ಕೋಶಾಧಿಕಾರಿಗಳಾದ ಅನಿಲ್ ಕುಮಾರ್ ಪುತ್ತೂರು ಮತ್ತು ಕಿಶೋರ್ ದೇವಾಡಿಗೆ ಪುತ್ತೂರು, ಪ್ರಭಾಕರ ಶೆಟ್ಟಿ ಸಾಗುಮನೆ, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ವಿಜಯ ಪ್ರಭು ಪಡುಮನೆ, ಪಿ. ಗುರುರಾಜ್ ಭಟ್ ದೇಂದಡ್ಕ ಪಿ. ನಾಗರಾಜ್ ಭಟ್ ದೇಶದಡ್ಯ, ಆಶೋಕ್ ಭಂಡಾರಿ ಪುತ್ತೂರು, ಮಹೇಶ್ ಹೆಗ್ಡೆ ದೇಂದಡ್ಯ ಸುಂದರ ಮೂಲ್ಯ ಸೇರಿದಂತೆ ಸ್ಥಳೀಯ ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಮುಂದಿನ ಪೂರ್ವಭಾವಿ ಕಾರ್ಯಗಳ ಕುರಿತು ಚರ್ಚೆ ನಡೆಯಿತು.
