ಐವನ್‌ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಧನ

0
17

ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ  ವಿವಿಧ ಕಾಯಿಲೆಯಿಂದ ಬಳಲುವ 4 ಜನ ಅರ್ಜಿದಾರರಿಗೆ  ರೂ.4,55,555/- (ರೂಪಾಯಿ ನಾಲ್ಕು ಲಕ್ಷದ ಐವತ್ತೈದುಸಾವಿರದ ಐದುನೂರ ಐವತೈದು)   ಪರಿಹಾರ ಧನ  ಅರ್ಜಿದಾರರ ಖಾತೆಗೆ ಬಿಡುಗಡೆ.

ವಿವಿಧ ಕಾಯಿಲೆಗಳಿಂದ ಬಳಲುವ ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಮಾನ್ಯಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜ ರವರ ಮನವಿಯ ಮೇರೆಗೆ ಶ್ರೀಮತಿ ಹಾಜಿರ ಅಡ್ಡೂರು ಇವರಿಗೆ  ರೂ.1.75ಲಕ್ಷ, ಶ್ರೀ ಕುದ್ರುತುಲ್ಲಾ ಕುಂಜತ್ತ್‌ಬೈಲ್‌ ಮಂಗಳೂರು ಇವರಿಗೆ 94,943/-     ಶ್ರೀ ಆಲ್ಬರ್ಟ್‌ ಡಿʼಸೋಜಾ ಮಂಗಳೂರು ಇವರಿಗೆ 75,612/-, ಶ್ರೀ ಅನ್ವರ್‌ ಹುಸೇನ್‌ ಮಯ್ಯದಿ ಬಂದರ್‌ ಇವರಿಗೆ ರೂ. 70,000/-, ಶ್ರೀ ಬಸಮ್ಮ ಇವರಿಗೆ ರೂ. 40,000/-, ಪರಿಹಾರ ಧನದ ಬಿಡುಗಡೆ ಪತ್ರವನ್ನು ಮಹಾನಗರ ಪಾಲಿಕೆ ವಿಧಾನ ಪರಿಷತ್‌ ಶಾಸಕರ ಕಛೇರಿಯಲ್ಲಿ ಹಸ್ತಾಂತರಿಸಲಾಯಿತು.

 ಈ ಸಂದರ್ಭದಲ್ಲಿ  ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷರು ಜೋಕಿಮ್ ಸ್ಟ್ಯಾನಿ ಅಳ್ವಾರಿಸ್, ಕೊಂಕಣಿ ಸಾಹಿತ್ಯ ಅಕಾಡಮಿ  ಸದಸ್ಯರಾದ ಸಾಮರ್ಥ ಭಟ್, ರೊನಾಲ್ಡ್ ಕ್ರಾಸ್ಟಾ, ನವೀನ್ ಲೋಬೋ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮೆಲ್ವಿನ್, ಮೀನಾ ಟೆಲ್ಲೀಸ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here