ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜರವರ ಶಿಫಾರಸ್ಸಿನ ಮೇರೆಗೆ ಪರಿಹಾರ ಹಣ ಬಿಡುಗಡೆ

0
46

ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಕಾಯಿಲೆಯಿಂದ ಬಳಲುವ ೮ ಜನ ರ‍್ಜಿದಾರರಿಗೆ ರೂ.೫,೫೯,೪೭೧/- ( ರೂಪಾಯಿ ಐದು ಲಕ್ಷದ ಐವತ್ತೊಂಬತ್ತು ಸಾವಿರದ ನಾಲ್ಕುನೂರ ಎಪ್ಪತ್ತೊಂದು) ಪರಿಹಾರಧನ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ.

ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಫಲಾನುಭವಿಗಳಿಗೆ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರ ಮನವಿಯ ಮೇರೆಗೆ, ಹಾಜಿರ ಮಂಗಳೂರು ಇವರಿಗೆ ರೂ.೧.೭೫ಲಕ್ಷ, ನೌಶಿರ ಜೆಪ್ಪು ಮಹಾಕಾಳಿ ಪಡ್ಪು ಇವರಿಗೆ ರೂ.೯೦,೯೮೯/-, ಚಿತ್ತರಂಜನ್ ಜೆ. ಅತ್ತಾವರ ಇವರಿಗೆ ರೂ. ೮೧,೯೦೭/-, ಅನ್ವರ್ ಹುಸೇನ್ ಮಯ್ಯದಿ ಕಾವೂರು ಇವರಿಗೆ ರೂ. ೭೦,೦೦೦/-, ಉಮೇಶ್ಚಂದ್ರ ಮಲ್ಲೂರು ಇವರಿಗೆ ೫೨,೮೯೫/-, ಎಂ.ರಾಜೇಂದ್ರ ಜೆಪ್ಪು ಬಪ್ಪಾಲ್ ಇವರಿಗೆ ೩೯,೩೯೯/-, ಸುರೇಂದ್ರ ಭಂಡಾರಿ ಕಾವೂರು. ಇವರಿಗೆ ರೂ.೨೮,೮೧೧/- ನಸೀಮಾ ಭಾನು ಬಂಟ್ವಾಳ ಇವರಿಗೆ ರೂ.೨೦,೪೭೦/-, ಪರಿಹಾರ ಧನದ ಬಿಡುಗಡೆ ಪತ್ರವನ್ನು ಮಹಾನಗರ ಪಾಲಿಕೆ ವಿಧಾನ ಪರಿಷತ್ ಶಾಸಕರ ಕಛೇರಿಯಲ್ಲಿ ಹಸ್ತಾಂತರಿಸಲಾಯಿತು.

ರೋಹನ್ ಕರ‍್ಪೋರೇಶನ್ ಮುಖ್ಯಸ್ಥರಾದ ರೋಹನ್ ಮಾಂತೆರೋ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾದ ನೀತು ಡಿಸೋಜಾ, ಮಾಜಿ ಮ.ನ.ಪ ನಾಮ ನರ‍್ದೇಶನ ಸದಸ್ಯರಾದ ಸತೀಶ್ ಪೆಂಗಲ್, ಕಾಂಗ್ರೆಸ್ ನಾಯಕರಾದ ಸಿರಾಜ್ ಬಜಪೆ, ಅಬೂಬಕ್ಕರ್ ಸಿದ್ದಿಕ್, ಜಿಲ್ಲಾ ಉಪಾಧ್ಯಕ್ಷರಾದ ಕರ‍್ತನ್ ಗೌಡ ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here