ಮಂಗಳೂರು: ಕಾನೂನು ಹೆಸರಿನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ತಡೆಯೊಡ್ಡುತ್ತಿರುವುದನ್ನು ವಿರೋಧಿಸಿ ಸೆ. 9ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಕದ್ರಿ ಗೋರಕ್ಷ ಹಾಲ್ ನಲ್ಲಿ ಬೃಹತ್ ಜನಾಗ್ರಹ ಸಭೆ ನಡೆಯಲಿದೆ.
ರಂಗಭೂಮಿ ಕಲಾವಿದವರು, ಯಕ್ಷಗಾನ ಕಲಾವಿದವರು, ದೈವ ನರ್ತಕರು, ತುಳು ಚಿತ್ರರಂಗ ಕಲಾವಿದವರು, ಸಂಗೀತ ಗಾಯಕರು, ನಿರೂಪಕರು ಹಾಗೂ ಫೊಟೋಗ್ರಾಫ್ ಇವರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ ನ ಸಹಯೋಗದಲ್ಲಿ ಈ ಜನಾಗ್ರಹ ಸಭೆ ನಡೆಯಲಿದೆ ಎಂದು ಧ್ವನಿವರ್ದಕ ಮತ್ತು ದೀಪಲಂಕಾರ ಮಾಲಕರ ಜಿಲ್ಲಾ ಸಂಘ ಪ್ರಕಟಣೆ ಹೊರಡಿಸಿದೆ.