ತುಳುವಲ್ಡ್ ಫೌಂಡೇಶನ್ ಕಟೀಲ್ ನ ತುಳುವ ಮಹಾಸಭಾದ ಮುತುವರ್ಜಿಯಿಂದ ನಡೆಸಲ್ಪಡುತ್ತಿರುವ ಪುರಾತನ ಕಾಲದ ದೇವಾಲಯ, ಅಜೀರ್ಣಾವಸ್ಥೆಯಲ್ಲಿರುವ ತುಳುನಾಡಿನ ಅಧಿದೇವತೆಯಾದ ತುಳುವೇಶ್ವರ ದೇವಾಲಯದ ಪುನರುತ್ಥಾನದ ಕೈಂಕರ್ಯಕ್ಕೆ ನನ್ನ ಬಹುಮತವಿದೆ ಇಂತಹ ಪುಣ್ಯಕಾರ್ಯಗಳಿಂದ ತುಳುನಾಡಿಗೆ ಸನ್ಮಂಗಳವಾಗಲಿ ಎಂದು ಹಾರೈಸಿದರು.

ನಿವೃತ್ತ ಯೋಧರಾದ ಶ್ರೀಯುತ ಎಂ ರಾಮಚಂದ್ರ ನಾಯಕ್ ಅವರನ್ನು 2/10/2025 ರಂದು ಉಡುಪಿ ತುಳುವ ಮಹಾಸಭಾದ ಪ್ರಧಾನ ಸಂಚಾಲಕರು, ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು, ಸಂಚಾಲಕರಾದ ವಿಖ್ಯಾತ್ ಪುತ್ತೂರು ರವರು ತುಳುವ ಮಹಾಸಭಾವನ್ನು ಬಲಪಡಿಸುವ ನಿಟ್ಟಿನಲ್ಲಿ ಭೇಟಿ ನೀಡಿದರು.
ಶ್ರೀಯುತ ಎಂ ರಾಮಚಂದ್ರ ನಾಯಕ್ ಜೀವನ ಮತ್ತು ಸಾಧನೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನ ಕರಿಮಣೇಲು ಗ್ರಾಮದ ಮೂಂಕಾಡಿ ಎಂಬಲ್ಲಿ ಶ್ರೀಮತಿ ಗಿರಿಜಾ ಹಾಗೂ ಶ್ರೀ ಕೊಗ್ಗ ನಾಯಕ್ ದಂಪತಿಗಳ ಪುತ್ರರಾಗಿ 14/11/1956ರಲ್ಲಿ ಜನಿಸಿದ ಇವರು ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ವೇಣೂರಿನಲ್ಲಿ ಪೂರೈಸಿ ಮುಂದಿನ ವಿದ್ಯಾಭ್ಯಾಸವನ್ನು ಮೂಡಬಿದಿರೆ ಮಹಾವೀರ ಕಾಲೇಜಿನಲ್ಲಿ ಪಡೆದು ಬಿ.ಎ ಪದವಿಯೊಂದಿಗೆ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ, “ದೇಶ ಸೇವೆಯೇ ಈಶ ಸೇವೆ” ಎಂಬ ಮಹತ್ತರ ಧೋರಣೆಯೊಂದಿಗೆ 1977ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ದೇಶಸೇವೆಯನ್ನು ಸಲ್ಲಿಸುವುದರ ಜೊತೆಜೊತೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಸಂಪನ್ನಗೊಳಿಸಿದ್ದಾರೆ.
ಸುಮಾರು 34 ವರ್ಷಗಳ ಸುಧೀರ್ಘ ಸೇವೆಯಲ್ಲಿ ದೇಶದ ಪೂರ್ವೋತ್ತರ ರಾಜ್ಯಗಳಾದ ಮೇಘಾಲಯ, ತ್ರಿಪುರ, ಅಸ್ಸಾಂ, ಬಾಂಗ್ಲಾದೇಶದ ಗಡಿಭಾಗ, ಜಮ್ಮು-ಕಾಶ್ಮೀರ – ಪಾಕಿಸ್ತಾನದ ಗಡಿಭಾಗಗಳಲ್ಲಿ 2 ಬಾರಿ ನಿಯುಕ್ತಿಗೊಂಡ ಇವರ ವಿಶೇಷ ಸೇವೆ, ಉತ್ತಮ ಸೇವೆಗಾಗಿ, ಸೇನಾ ಪ್ರಮುಖರ (COAS Comadationa Card) ಪ್ರಶಂಸಾ ಪತ್ರದ ಭಾಜಕರಾಗಿದ್ದಾರೆ.
Subedar Major & Honorary Commissioned Officer ಹುದ್ದೆಯನ್ನು ಯಶಸ್ವಿಯಾಗಿ ಪೂರೈಸಿ 2010ರಲ್ಲಿ ಸೇನಾ ನಿವೃತ್ತಿಯಾದ ಬಳಿಕ 2011 ರಿಂದ 2014 ರವರೆಗೆ ಮಣಿಪಾಲದ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜರ್ ಹುದ್ದೆ ಅಲಂಕರಿಸಿ ಉತ್ತಮ ಸೇವೆ ಸಲ್ಲಿಸಿದ್ದಾರೆ.
ಉತ್ತಮ ಯೋಗಪಟುವಾದ ಇವರು ಬಾಬಾ ರಾಮ್ ದೇವ್ ರ ಕಟ್ಟಾ ಅಭಿಮಾನಿಯಾಗಿದ್ದು, 2014ರಿಂದ ಯೋಗಪೀಠ ಹರಿದ್ವಾರದ ಸಹಯೋಗದೊಂದಿಗೆ ಮೂಡುಬಿದಿರೆ ಪತಂಜಲಿ ಯೋಗಪೀಠ ವಲಯದಿಂದ ನಡೆಯುವ ಶಿಬಿರಗಳಲ್ಲಿ, ವೇಣೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ಕಲ್ಲಬೆಟ್ಟು ಶ್ರೀ ಸತ್ಯ ಸಾಯಿ ಭಜನಾ ಮಂದಿರದಲ್ಲಿ ಹೀಗೆ ಹಲವು ಕಡೆಗಳಲ್ಲಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂಡುಬಿದಿರೆ ಮಾಜಿ ಸೈನಿಕರ ವೇದಿಕೆಯನ್ನು ಸ್ಥಾಪಿಸಿ, ಸ್ಥಾಪಕಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಸೈನಿಕ ಸಂಘ ಮಂಗಳೂರು ಇದರ ಸದಸ್ಯರಾಗಿದ್ದಾರೆ.
ಜನರ ಆರೋಗ್ಯದ ದೃಷ್ಟಿಯಿಂದ ಜನಜಾಗೃತಿ ಮಾಡಿ, ಜನರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಪ್ರಸ್ತುತ ವೇಣೂರಿನ ಹೃದಯ ಭಾಗದಲ್ಲಿ “ಪುನರ್ನವ” ಎಂಬ ಸ್ವದೇಶಿ ಹಾಗೂ ಪತಂಜಲಿ ಉತ್ಪನ್ನಗಳ ಮಳಿಗೆಯನ್ನು ಪ್ರಾರಂಭಿಸಿದ್ದಾರೆ.
ಎಂ ರಾಮಚಂದ್ರ ನಾಯಕ್ ರವರ ದೇಶ ಸೇವೆಯ ಸೈನಿಕ ವೃತ್ತಿಗೆ, ಕಷ್ಟ-ಸುಖಗಳ ಏರಿಳಿತಗಳ ಸಂಕಷ್ಟಗಳಿಗೆ ಶಕ್ತಿಯಾಗಿ, ಸಂಸಾರಕ್ಕೆ ನೆರಳಾಗಿ ನಿಂತ ಧರ್ಮಪತ್ನಿ ಶ್ರೀಮತಿ ಗೀತಾ ಹಾಗೂ ಇಬ್ಬರು ಮಕ್ಕಳ ಸಂಸಾರಿ ಆಗಿರುವ ಇವರಿಗೆ ತುಳುವೇಶ್ವರ ಹಾಗೂ ತುಳುವೇಶ್ವರಿ ದೇವರು, ದೈವಗಳು ಸುಖ ಶಾಂತಿ ನೆಮ್ಮದಿ ಕರುಣಿಸಿ ಇನ್ನಷ್ಟು ಜನಸೇವೆ ಇವರಿಂದ ನೆರವೇರುವಂಥಾಗಲಿ ಎಂಬುದು ನಮ್ಮ ಆಶಯ.

ಬರಹ-ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು
ದೇಶಸೇವೆ ಈಶಸೇವೆ, ಸೇನೆಯಲ್ಲಿ ಗಡಿ,ಸರಹದ್ದಿನಲ್ಲಿ ನಿಷ್ಠೆಯಿಂದ ಕೆಲಸ ಮಾಡಿ ಸುಬೇದಾರ್ ಪದವಿಯಿಂದ ನಿವೃತ್ತರಾದ ರಾಮಚಂದ್ರನಾಯಕರವರಿಗೆ ಪ್ರಶಸ್ತಿ ನೀಡಿರುವುದಕ್ಕೆ ಶುಭಾಶಯಗಳು ಅಭಿನಂದನೆಗಳು 🥇🎖️🏅🥉🙏🙏🙏🙏🙏🙏🙏🙏 ಶ್ರೀಮತಿ ಮಾಲತಿ ಬೆಂಗಳೂರು