ತುರ್ತು ಚಿಕಿತ್ಸೆಗಾಗಿ ಆರ್ಥಿಕ ಸಹಾಯದ ಮೊರೆ

0
32

“ಒಂದು ಪುಟ್ಟ ನೆರವು, ಒಂದು ಜೀವ ಉಳಿಸಬಲ್ಲದು”

ಹೊನ್ನಾವರದ ಪ್ರಭಾತ್ ನಗರದ ನಿವಾಸಿ ಸುಪ್ರೀತಾ ಪಾಲೇಕರ್ (27 ವರ್ಷ) ಅವರು ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಆರ್ಥಿಕ ಸಹಾಯದ ತುರ್ತು ಅಗತ್ಯವಿದೆ.

ಸುಪ್ರೀತಾ ಅವರಿಗೆ Abdominal TB ಮತ್ತು Crohn’s Disease ಕಾಣಿಸಿಕೊಂಡಿದ್ದು, ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎರಡು ತಿಂಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿರುವ ಸುಪ್ರೀತಾ, ವಿಧವೆ ತಾಯಿಗೆ ಆಸರೆಯಾಗಬೇಕಿದ್ದವರು. ಈಗ ತಾಯಿ ಮಗಳ ಜೀವ ಉಳಿಸಲು ಹೋರಾಡುತ್ತಿದ್ದಾರೆ.

ತಾಯಿ ತನ್ನಲ್ಲಿದ್ದ ಒಡವೆ-ವಸ್ತುಗಳನ್ನು ಅಡವಿಟ್ಟು ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಮುಂದಿನ ಸುದೀರ್ಘ ಚಿಕಿತ್ಸೆಗೆ ಹಣದ ಕೊರತೆ ಎದುರಾಗಿದೆ.
ಕೈಲಾದ ಧನಸಹಾಯವನ್ನು ಮಾಡುವ ಮೂಲಕ ಸುಪ್ರೀತಾರನ್ನು ಸಾವಿನ ದವಡೆಯಿಂದ ಪಾರು ಮಾಡಲು ಕೈ ಜೋಡಿಸಿ.


LEAVE A REPLY

Please enter your comment!
Please enter your name here