ಮಕ್ಕಳ ಬೇಡಿಕೆಗಳಿಗೆ ಸ್ಪಂದನೆ: ಪಾಲಡ್ಕ ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆಯಲ್ಲಿ ನಿರ್ಣಯ

0
19

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ 2025–26ನೇ ಸಾಲಿನ ಮಕ್ಕಳ ಗ್ರಾಮ ಸಭೆ ಕಡಂದಲೆ ಪಲ್ಕೆ ಗಣೇಶ್ ದರ್ಶನ್ ಸಭಾಭವನದಲ್ಲಿ ಸಭಾಧ್ಯಕ್ಷರಾದ ಭವಿಷ್ ಅವರ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳು ಹಾಗೂ ಅಗತ್ಯಗಳನ್ನು ಮುಕ್ತವಾಗಿ ಮಂಡಿಸಿದರು.

ಕಡಂದಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿಯ ವಿದ್ಯಾರ್ಥಿಗಳು ಸೌಚಾಲಯ ನಿರ್ಮಾಣ, ಹೆಚ್ಚುವರಿ ಕೊಠಡಿ ವ್ಯವಸ್ಥೆ ಹಾಗೂ ಕಂಪ್ಯೂಟರ್–ಪ್ರಿಂಟರ್ ಒದಗಿಸುವಂತೆ ಮನವಿ ಮಾಡಿದರು. ಕಡಂದಲೆ ಸರ್ಕಾರಿ ಹಿರಿಯ ಪ್ರಾಥಮಿಕ ಮೈನ್ ಶಾಲೆಯ ವಿದ್ಯಾರ್ಥಿಗಳು ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆ ಮುಂದಿಟ್ಟರು.
ಪಾಲಡ್ಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇಮಾರು ವಿದ್ಯಾರ್ಥಿಗಳು ಶಾಲಾ ವಠಾರಕ್ಕೆ ನಾಮಫಲಕ ಅಳವಡಿಕೆ, ಹಮ್ಸ್ ವ್ಯವಸ್ಥೆ ಹಾಗೂ ಆಟದ ಮೈದಾನ ಕಲ್ಪಿಸುವಂತೆ ಒತ್ತಾಯಿಸಿದರು. ಇದೇ ವೇಳೆ ಕಡಂದಲೆ ಸುಬ್ರಹ್ಮಣ್ಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೆಚ್ಚುವರಿ ಪುಸ್ತಕಗಳು ಹಾಗೂ ಇನ್ಸುಲೇಟರ್ ವ್ಯವಸ್ಥೆ ಒದಗಿಸುವಂತೆ ಕೋರಿದರು.


ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಅಮಿತಾ ನಾಯ್ಕ, ಉಪಾಧ್ಯಕ್ಷರಾದ ಪ್ರವೀಣ್ ಸೀಕ್ವೆರ, ಪಂಚಾಯತ್ ಸದಸ್ಯರು, ಶಿಕ್ಷಣ ಇಲಾಖೆಯ ರಾಜೇಶ್ವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೀಣಾ, ಪಾಲಡ್ಕ ಆರೋಗ್ಯ ಇಲಾಖೆಯ ಪ್ರಾಧ್ಯಾಪಕರಾದ ಶ್ವೇತಾ, ಸಂಪನ್ಮೂಲ ವ್ಯಕ್ತಿ ಸುಧಾಕರ್ ಪೋಸ್ರಲ್, ಪಂಚಾಯತ್ ಕಾರ್ಯದರ್ಶಿ ಮೋಹಿನಿ ಶೆಟ್ಟಿ, ಪಂಚಾಯತ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುಳ ಹುನಗುಂದ ನಿರೂಪಿಸಿದರು. ಕಶ್ವಿ ಸ್ವಾಗತಿಸಿದರು. ಸಮೀಕ್ಷಾ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here