ಮಹಾಶಿವರಾತ್ರಿ ಪ್ರಯುಕ್ತ ಕಲಾಕುಂಚ “ಅಂಚೆ ಕುಂಚ” ರಾಜ್ಯ ಮಟ್ಟದ ಉಚಿತ ಸ್ಪರ್ಧೆಯ ಫಲಿತಾಂಶ

0
16

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ಪ್ರಯುಕ್ತ ಕಲಾಕುಂಚ ರಾಜ್ಯ ಮಟ್ಟದ ಉಚಿತವಾಗಿ “ಅಂಚೆ ಕುಂಚ” ಚಿತ್ರ ಬರೆಯುವ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ ಎಂದು ಕಲಾಕುಂಚದ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ತಿಳಿಸಿದ್ದಾರೆ.

ಚಿತ್ರ ಕಲಾವಿದರ ವಯೋಮಾನದಂತೆ ವಿವಿಧ ವಿಭಾಗಗಳಾಗಿ ವಿಂಗಡಿಸಿ ಹಿರಿಯರ ವಿಭಾಗದಲ್ಲಿ ಭಾನುವಳ್ಳಿ ಶಿವಕುಮಾರ್ ಆರ್. ಪ್ರಥಮ ಬಹುಮಾನ, ದಾವಣಗೆರೆಯ ಕವಿತಾ ಚೇತನ ದ್ವಿತೀಯ ಬಹುಮಾನ, ಬ್ಯಾಡಗಿಯ ಜಯಮ್ಮ ಹಿರೇಮಠ ತೃತೀಯ ಬಹುಮಾನ ಪಡೆದಿದ್ದಾರೆ. ಪ್ರೌಢ ವಿಭಾಗದಲ್ಲಿ ದಾವಣಗೆರೆಯ ಕುಮಾರಿ ಚಂದನ ಪಿ, ಕುಮಾರಿ ಶಿವಾನಿ ಆರ್.ಎಸ್. ಕುಮಾರಿ ಮಧುಶ್ರೀ ಕೆ. ಕುಮಾರಿ ನಿಧಿಶ್ರೀಯವರು ಪ್ರಥಮ ಬಹುಮಾನ, ಹರಿಹರದ ಕುಮಾರಿ ಭೂಮಿಕ ದ್ವಿತೀಯ ಬಹುಮಾನ, ಹರಿಹರದ ಕುಮಾರ ಗುರುತಿಪ್ಪೇರುದ್ರ ಮತ್ತು ಮುದ್ದೇಬಿಹಾಳ್‌ದ ಕುಮಾರಿ ಗಂಗಾಶ್ರೀ ಹಿರೇಮಠರವರು ತೃತೀಯ ಬಹುಮಾನ ಪಡೆದಿದ್ದಾರೆ.

ಕಿರಿಯರ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕುಂಜಿಬೆಟ್ಟು ಕುಮಾರಿ ಪ್ರಿಯದರ್ಶಿನಿ ಮತ್ತು ದಾವಣಗೆರೆಯ ಕುಮಾರಿ ಚಿರಸ್ವಿ ಪ್ರಥಮ ಬಹುಮಾನ, ದಾವಣಗೆರೆಯ ಆರಾಧ್ಯ ಪ್ರವೀಣ್ ಪೈ ದ್ವಿತೀಯ ಬಹುಮಾನ, ಬೆಂಗಳೂರಿನ ಕುಮಾರಿ ವೈನವಿ ಬಿ.ಸಿ. ತೃತೀಯ ಬಹುಮಾನ ಪಡೆದಿದ್ದಾರೆ ಎಂದು ತೀರ್ಪುಗಾರರೊಬ್ಬರಾದ ಹಿರಿಯ ಚಿತ್ರ ಕಲಾವಿದರು, ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
ಕಲಾಕುಂಚದ ಸಂಸ್ಥೆಯ ಸರ್ವ ಸದಸ್ಯರು, ಪದಾಧಿಕಾರಿಗಳು ಬಹುಮಾನ ವಿಜೇತರಾದ ಹಿರಿಯ, ಕಿರಿಯ ಚಿತ್ರ ಕಲಾವಿದರಿಗೆ ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here