ಕನಕ ಕೀರ್ತನ ಗಂಗೋತ್ರಿ’ ಗಾಯನ ಕಾರ್ಯಕ್ರಮದ ಫಲಿತಾಂಶ

0
26


12 ಗಾಯಕರು ಮತ್ತು 9 ತಂಡಗಳಿಗೆ ಕನಕ ಪುರಸ್ಕಾರ

ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ʻಕನಕ ಜಯಂತಿʼ ಪ್ರಯುಕ್ತ ನವಂಬರ್ 12 ರಂದು ನಡೆದ ʻಕನಕ ಕೀರ್ತನ ಗಂಗೋತ್ರಿʼ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದ ಫಲಿತಾಂಶ ಪ್ರಕಟವಾಗಿದೆ. 12 ಉದಯೋನ್ಮುಖ ಗಾಯಕರು ಮತ್ತು 9 ತಂಡಗಳು ಕನಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದು ಕನಕದಾಸ‌ ಸಂಶೋಧನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ತಿಳಿಸಿದ್ದಾರೆ.

ಪ್ರೌಢ ಶಾಲಾ ವಿಭಾಗ ದಲ್ಲಿ ಆಯುಷ್‌ ಪ್ರೇಮ್‌ 9ನೇ ತರಗತಿ ಸೆಂಟ್‌ ಅಲೋಸಿಯಸ್‌ ಹೌಸ್ಕೂಲ್‌, ಕೊಡಿಯಾಲ್‌ಬೈಲ್‌ ಪ್ರದಯ್ಯ ಶೆಣೈ, 9ನೇ ತರಗತಿ ಕೆನರಾ ಸಿಬಿಎಸ್‌ಇ ಸ್ಕೂಲ್‌, ಡೊಂಗರಕೆರೆ, ಮಂಗಳೂರು, ನಿಸ್ವನ, 8ನೇ ತರಗತಿ ಪರಿಜ್ಞಾನ ವಿದ್ಯಾಲಯ, ಸೋಮೇಶ್ವರ

ಪದವಿಪೂರ್ವ ವಿಭಾಗದಲ್ಲಿ ನಿಹಾಲ್‌ ಪ್ರಥಮ ಪಿಯುಸಿ ಆಳ್ವಾಸ್‌ ಪಿಯು ಕಾಲೇಜು, ಮೂಡಬಿದ್ರೆ , ಅನನ್ಯ ನಾರಾಯಣ್‌ ಪ್ರಥಮ ಪಿಯುಸಿ ಸೈಂಟ್‌ ಅಲೋಶಿಯಸ್‌ ಕಾಲೇಜು, ಮಂಗಳೂರು, ಪೂರ್ವಿ ಬಿ.ಎಸ್‌ ಪ್ರಥಮ ಪಿಯುಸಿ ಶಾರದ ಪಿಯು ಕಾಲೇಜು ಕೊಡಿಯಾಲ್‌ಬೈಲ್‌ಮಂಗಳೂರು.

ಪದವಿ ವಿಭಾಗ ಸಮೂಹ ಗಾಯನದಲ್ಲಿ ವಿವೇಕಾನಂದ ಕಾಲೇಜು ಆಫ್‌ ಆರ್ಟ್ಸ್‌, ಸಾಯನ್ಸ್‌ ಆಂಡ್‌ ಕಾಮರ್ಸ್‌ (ಸ್ವಾಯತ್ತ) ಪುತ್ತೂರು, ಎಸ್.ಡಿ.ಎಂ ಕಾಲೇಜು ಮಂಗಳೂರು, ಮುನಿಯಾಲು ಆಯುರ್ವೇದ ಕಾಲೇಜು, ಮಣಿಪಾಲ.

ಸ್ನಾತಕೋತ್ತರ ವಿಭಾಗದಲ್ಲಿ ಅನನ್ಯ ಲಕ್ಷ್ಮೀ ಎನ್‌ ಗಣಿತಶಾಸ್ತ್ರ ವಿಭಾಗ ಮಣಿಪಾಲ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ, ಮಣಿಪಾಲ, ಮೇಧಾ ನಾಯರ್ಪಳ್ಳ ದ್ವಿತೀಯ ಎಂಎಸ್ಸಿ ಸಸ್ಯಶಾಸ್ತ್ರ ಮಂಗಳೂರು ವಿಶ್ವವಿದ್ಯಾನಿಲಯ, ವೈಭವಿ ಎಂ. ರಾವ್‌ ಪ್ರಥಮ ಎಂಎಸ್ಸಿ ಕೆಮೆಸ್ಟ್ರಿ
ಮಂಗಳೂರು ವಿಶ್ವವಿದ್ಯಾನಿಲಯ

ಅಧ್ಯಾಪಕ ವಿಭಾಗದಲ್ಲಿ ಅಶ್ವಿನಿ ಸುವರ್ಣ, ಅಧ್ಯಾಪಕರು, ಸರಕಾರಿ ಪದವಿಪೂರ್ವ ಕಾಲೇಜು, ಪಡುಬಿದ್ರೆ, ಕಾಪು, ಪ್ರೇಮನಾಥ ಅಚಾರ್ಯ, ಅಧ್ಯಾಪಕರು, ಸರಕಾರಿ ಪ್ರೌಢಶಾಲೆ, ಬೈಕಂಪಾಡಿ, ಮಂಗಳೂರು, ಡಾ. ರಶ್ಮಿ ಕಲ್ಕೂರ, ಅಧ್ಯಾಪಕರು, ಮುನಿಯಾಲು ಆಯುರ್ವೇದ ಕಾಲೇಜು, ಮಣಿಪಾಲ

ಅಧ್ಯಾಪಕೇತರ ವಿಭಾಗದಲ್ಲಿ ಸಮೂಹ ಗಾಯನ ವಿಭಾಗದಲ್ಲಿ ರೋಹಿತ್‌ ಮತ್ತು ಬಳಗ, ಮಂಗಳೂರು ವಿಶ್ವವಿದ್ಯಾನಿಲಯ , ಕವಿತ ಮತ್ತು ಬಳಗ ಮಂಗಳೂರು ವಿಶ್ವವಿದ್ಯಾನಿಲಯ, ಶಿಲ್ಪಕುಮಾರಿ ಜೈನ್‌ ಮತ್ತು ಬಳಗ ಮಂಗಳೂರು ವಿಶ್ವವಿದ್ಯಾನಿಲಯ

ಸಾರ್ವಜನಿಕ ಸಮೂಹ ಗಾಯನ ವಿಭಾಗದಲ್ಲಿ ಸಂವಾದಿನಿ ಕಲಾ ಬಳಗ, ಮೂಲ್ಕಿ , ನಾಗೇಶ್‌ ಸಾಲಿಯಾನ್‌ ಮತ್ತು ತಂಡ ಪಡೀಲ್‌, ಮಂಗಳೂರು, ಸಪ್ತಸ್ವರ ಕಲಾ ತಂಡ ಕೊಣಾಜೆ ʻಕನಕ ಪುರಸ್ಕಾರಕ್ಕೆʼ ಆಯ್ಕೆಯಾಗಿರುತ್ತದೆ ಒಟ್ಟು 216 ಅಭ್ಯರ್ಥಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ತೋನ್ಸೆ ಪುಷ್ಕಳ ಕುಮಾರ್‌, ಸಂಧ್ಯಾ ಮಂಗಳೂರು, ರಶ್ಮಿ ಶ್ರೀನಿವಾಸ್‌, ಮಂಚಿ ಮಂಜುಳಾ ಸುಬ್ರಹ್ಮಣ್ಯ, ಶಾಲಿನಿ ಹೆಬ್ಬಾರ್‌, ಯಶವಂತ ಕುದ್ರೋಳಿ ಇವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here