ಮೂಡಬಿದರೆ ತಾಲೂಕು ಮಟ್ಟದ ಕ್ರೀಡಾಕೂಟದ ಫಲಿತಾಂಶ

0
21

ಇತ್ತೀಚೆಗೆ ಸ್ವರಾಜ್ ಮೈದಾನದಲ್ಲಿ ನಡೆದ ಮೂಡುಬಿದ್ರೆ ಶಾಲಾ ಶಿಕ್ಷಣ ಇಲಾಖೆ, ಬಿಇಓ ಕಚೇರಿ, ಹಾಗೂ ಸರ್ಕಾರಿ ಪ್ರೌಢಶಾಲೆ ಪ್ರಾಂತ್ಯ ಇವುಗಳ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ಫಲಿತಾಂಶ:
14 ವರ್ಷದ ಕೆಳಗಿನ ಬಾಲಕರ ವಿಭಾಗದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಹಾಗೂ ವೈಯಕ್ತಿಕ ವಿಭಾಗದಲ್ಲಿ ಆದರ್ಶ ಆರ್ ಮತ್ತು ಸುಭಾಷ್ ಇಬ್ಬರು ಆಳ್ವಾಸ್, ಚಾಂಪಿಯನ್ ಆಗಿ ಹೊರಹೊಮ್ಮಿರುತ್ತಾರೆ.
14 ವರ್ಷದ ಕೆಳಗಿನ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ತಂಡ ಪ್ರಶಸ್ತಿಯನ್ನು ಗಳಿಸಿದ್ದರೆ ವೈಯಕ್ತಿಕ ವಿಭಾಗದಲ್ಲಿ ಮಾಲಾ ಟಿ ಆರ್, ಕೃತಿಕಾ ಕುಮಾರ ದುಪ್ಪಟೆ ಇಬ್ಬರು ಆಳ್ವಾಸ್, ಚಾಂಪಿಯನ್ ಆಗಿರುತ್ತಾರೆ.
17 ವರ್ಷದ ಕೆಳಗಿನ ಬಾಲಕರ ವಿಭಾಗದಲ್ಲಿ ಕೂಡ ಆಳ್ವಾಸ್ ಆಂಗ್ಲ ಮಾಧ್ಯಮ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ವೈಯಕ್ತಿಕ ವಿಭಾಗದಲ್ಲಿ ಸಂತೋಷ್ ಜಿ ಶಹಪುರ್ ಚಾಂಪಿಯನ್ ಆಗಿರುತ್ತಾರೆ.
17 ವರ್ಷದ ಕೆಳಗಿನ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರೆ ವೈಯಕ್ತಿಕ ವಿಭಾಗದಲ್ಲಿ ಪ್ರಿಯಾಂಕ ಮಾರುತಿ ಭಜನಿರಿ, ಪೂಜಾ ಹಾಗೂ ಅಮೂಲ್ಯ ಚಾಂಪಿಯನ್ನಾಗಿರುತ್ತಾರೆ.
ಕಂಡ ಪ್ರಶಸ್ತಿಗಳ ಒವರಾಲ್ ಚಾಂಪಿಯನ್ ಆಗಿ ಆಳ್ವಾಸ್ ಆಂಗ್ಲ ಮಾಧ್ಯಮ ಎರಡು ವಿಭಾಗಗಳಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಿದೆ.
ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಡಲು ಮೂಡುಬಿದರೆ ತಾಲೂಕಿನ ಎಲ್ಲಾ ಶಾರೀರಿಕ ಶಿಕ್ಷಕರು, ಆಳ್ವಾಸ್ ಬಿಪಿಎಡ್ ತರಬೇತು ಶಿಕ್ಷಕರು ಹಾಗೂ ಶಾರೀರಿಕ ಶಿಕ್ಷಕರುಗಳು ಸಹಕಾರವನ್ನು ನೀಡಿದ್ದರು ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿರುತ್ತಾರೆ. 
.ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here