ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಕವನ ಸ್ಪರ್ಧೆ ಹಮ್ಮಿಕೊಂಡಿದ್ದು, ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ ಎಂದು ತೀರ್ಪುಗಾರರು, ಕವಯಿತ್ರಿ, ಸಾಹಿತಿ ಶ್ರೀಮತಿ ಶೈಲಾ ವಿನೋದ್ ದೇವರಾಜ್ ತಿಳಿಸಿದ್ದಾರೆ.
ಪ್ರಥಮ ಬಹುಮಾನ ದಾವಣಗೆರೆ ಜಿಲ್ಲೆ, ಚನ್ನಗಿರಿಯ ಡಾ|| ನಮಿತಾ ಸತೀಶ್, ದ್ವಿತೀಯ ಬಹುಮಾನ ಶಿವಮೊಗ್ಗ ಜಿಲ್ಲೆಯ ಮಾಚೇನಹಳ್ಳಿಯ ಎಸ್.ಪರಶುರಾಮಪ್ಪ, ತೃತೀಯ ಬಹುಮಾನ ಹಾವೇರಿಯ ರಾಜೇಂದ್ರ ಹೆಗಡೆ, ಸಮಾಧಾನಕರ ಬಹುಮಾನಗಳು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಾರೆಬೆಟ್ಟು ಸಂಧ್ಯಾ ಶ್ಯಾಮಭಟ್, ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಡು ಪಂಕಜಾ ಕೆ.ರಾಮಭಟ್, ಧಾರವಾಡದ ರೇಖಾ ಜೋಶಿ, ದಾವಣಗೆರೆಯ ಶ್ರೀಮತಿ ಕುಸುಮಾ ಲೋಕೇಶ್ ಪಡೆದಿರುತ್ತಾರೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
ಸ್ಪರ್ಧೆಯ ನಿಯಮದ ಪ್ರಕಾರ ಯಾವುದೇ ಸಭೆ, ಸಮಾರಂಭ ಇಲ್ಲದೇ ವಿಜೇತರಾದ ಕವಿ, ಕವಯತ್ರಿಯರು ಕೊಟ್ಟ, ವ್ಯಾಟ್ಸಪ್‌ಗೆ ಅವರವರ ಫಲಿತಾಂಶ, ಅಭಿನಂದನಾ ಪತ್ರ ಕಳಿಸಲಾಗುವುದು. ಕಲಾಕುಂಚದಿAದ ನಿತರಂತವಾಗಿ ವರ್ಷ ಪೂರ್ತಿ ಇಂತಹ ಉಚಿತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅವಕಾಶವಂಚಿತರಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಈ ಮುಕ್ತವಾದ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.
