ಋಗ್ ಸಂಹಿತಾ ಯಾಗ, ಭಾಗವತ ಸಪ್ತಾಹ : ಕರಂಬಳ್ಳಿಯಲ್ಲಿ ಕಾರ್ಯಾಲಯ ಉದ್ಘಾಟನೆ

0
8

ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ನಡೆಯಲಿರುವ ಋಗ್ ಸಂಹಿತಾ ಯಾಗ, ಶ್ರೀಮದ್ಭಾಗವತ ಸಪ್ತಾಹ ಹಾಗೂ ಶ್ರೀರಾಮ ತಾರಕ ಮಂತ್ರ ಪಠಣದೊಂದಿಗೆ ಲಕ್ಷ ಪ್ರದಕ್ಷಿಣೆ ಸಂಕಲ್ಪ ಕಾರ್ಯಕ್ರಮದ ಕಾರ್ಯಾಲಯ ಉದ್ಘಾಟನೆ ದಿನಾಂಕ 09-03-2026 ರಂದು ನೆರವೇರಿತು.

ಈ ಸಂದರ್ಭದಲ್ಲಿ ಉಡುಪಿಯ ನಿಕಟಪೂರ್ವ ಶಾಸಕರು ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ರಘುಪತಿ ಭಟ್ ಅವರು ಕಾರ್ಯಾಲಯವನ್ನು ಉದ್ಘಾಟಿಸಿ ಕಾರ್ಯಕ್ರಮದ ರೂಪರೇಷೆಗಳ ಕುರಿತು ಚರ್ಚಿಸಿ, ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು ಮತ್ತು ಶುಭ ಹಾರೈಸಿದರು.

ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here