ಉಡುಪಿ: ಕೇಂದ್ರ ಸರ್ಕಾರದ ನಾಲ್ಕು ಲೇಬರ್ ಕೋಡ್ ಹಿಂಪಡೆಯಲು ಹಾಗೂ ಕೇಂದ್ರ ಸರ್ಕಾರದ ಕಾಯ್ದೆ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿ ಮಾಡದಂತೆ ಆಗ್ರಹಿಸಿ ಉಡುಪಿಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು.
ಉಡುಪಿ ಸರ್ವಿಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕೆಎಂ ಮಾರ್ಗ, ಕೋರ್ಟ್ ರೋಡ್ ಮೂಲಕ ಸಾಗಿ ಜೋಡುಕಟ್ಟೆ ಬಳಿ ರಸ್ತೆ ತಡೆ ನಡೆಸುವ ಮೂಲಕ ಮುಕ್ತಾಯಗೊಂಡಿತು. ಜೋಡುಕಟ್ಟೆಯಲ್ಲಿ ರಸ್ತೆತಡೆ ನಡೆಸಿ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್, ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಕಟ್ಟಡ ಸಂಘದ ಅಧ್ಯಕ್ಷ ಸುಭಾಸ್ ನಾಯಕ್, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಸಂಜೀವ ಬಳ್ಳೂರು, ಎಐಟಿಯುಸಿ ಮುಖಂಡರಾದ ಶಶಿಕಲಾ, ಅಂಗನವಾಡಿ ಸಂಘ ಜಿಲ್ಲಾ ಅಧ್ಯಕ್ಷ ಭಾರತಿ ಎಸ್., ಬಿಸಿಯೂಟ ಸಂಘದ ಅಧ್ಯಕ್ಷ ರತ್ನ, ಉಡುಪಿ ಬೀಡಿ ಮುಖಂಡರಾದ ಉಮೇಶ್ ಕುಂದರ್, ಜನರಲ್ ಯೂನಿಯನ್ ಕಾರ್ಯದರ್ಶಿ ರಮೇಶ್, ಸಿಐಟಿಯು ಮುಖಂಡರಾದ ನಳಿನಿ ಎಸ್., ರಾಮ ಕಾರ್ಕಡ, ಸರೋಜ, ಸಾರಿಕ, ಶಾರದ, ಶರ್ಮಿಳ, ಸೌಮ್ಯ, ಶ್ವೇತಾ, ಕುನುಮ, ಮಂಜುಳ ಗಿರಿಜ, ಸೈಯಾದ್, ಮುರಳಿ, ರಮೇಶ್ ಬ್ರಹ್ಮಾವರ, ರಮೇಶ್, ವಾಮನ ಪೂಜಾರಿ, ನಾಗರಾಜ್, ರಾಮ ಸಾಲ್ಯಾನ್, ಗಣೇಶ್ ನಾಯ್ಕ ಶೇಖರ್ ಆಚಾರ್ಯ, ಸದಾಶಿವ ಪೂಜಾರಿ, ಉಪಸ್ಥಿತರಿದ್ದರು.

