ಹೆಬ್ರಿ : ಮುದ್ರಾಡಿ ಎಂ. ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢ ಶಾಲೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸುರಕ್ಷತಾ ನಿಯಮಗಳ ಕುರಿತು ಮಾಹಿತಿ ಕಾರ್ಯಕ್ರಮ ಮತ್ತು ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.
ಶಂಕರನಾರಾಯಣ ಕನ್ಸ್ಟ್ರಕ್ಷನ್ಸ್ ವರಂಗ ಕಾರ್ಕಳ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ಅಧಿಕಾರಿ ಶ್ರೀ ಕಿರಣ್ ಪ್ರಸಾದ್ ಪಾಲ್ಗೊಂಡು ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿ ಸುರಕ್ಷತೆ ನಮ್ಮ ದಿನನಿತ್ಯದ ಜೀವನದಲ್ಲಿ ಬಹಳ ಮುಖ್ಯ. ನಾವು ಎಚ್ಚರಿಕೆಯಿಂದ ಇರದಿದ್ದರೆ ಶಾಲೆಯಲ್ಲಿ, ಮನೆಯಲ್ಲಿ, ರಸ್ತೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಆಫಘಾತಗಳು ಸಂಭವಿಸಬಹುದು. ಭಾರತದಲ್ಲಿ ಪ್ರತಿವರ್ಷವೂ ಮಾರ್ಚ್ 4 ರಿಂದ 10 ರ ವರೆಗೆ ರಸ್ತೆ ಸುರಕ್ಷತಾ ಸಪ್ತಾಹ ದಿನವನ್ನಾಗಿ ಆಚರಿಸಲಾಗುತ್ತದೆ, ಆಫಘಾತಗಳನ್ನು ತಡೆಗಟ್ಟುವುದು ಮತ್ತು ಮಾನವ ಜೀವವನ್ನು ರಕ್ಷಿಸುವುದೇ ಇದರ ಉದ್ದೇಶವಾಗಿದೆ,ವಿದ್ಯಾರ್ಥಿಗ ಳು ರಸ್ತೆ ದಾಟುವಾಗ ಜಾಗರುಕರಾಗಿರಿ, ಶಾಲಾ ಸುರಕ್ಷತೆ, ಅಗ್ನಿ ಸುರಕ್ಷತೆ, ವಿದ್ಯುತ್ ಸುರಕ್ಷತೆ, ಇಂಟರ್ ನೆಟ್ ಸುರಕ್ಷತೆಯ ನಿಯಮಗಳನ್ನು ತಿಳಿದುಕೊಂಡು ಕಲಿಕೆಯತ್ತ ಗಮನಹರಿಸಿ ವಿದ್ಯಾವಂತರಾಗಿ, ನಾವೆಲ್ಲರೂ ಸುರಕ್ಷತಾ ನಿಯಮಗಳನ್ನು ಪಾಲಿಸಿ ಆಫಘಾತ ರಹಿತ ಸಮಾಜವನ್ನು ನಿರ್ಮಿಸುವ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.

ಅವರು ತಮ್ಮ ಕನ್ಸ್ಟ್ರಕ್ಷನ್ಸ್ ವತಿಯಿಂದ ಮುದ್ರಾಡಿ ಎಂ. ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲು ಕರೆ ನೀಡಿದರು.
ವೇದಿಕೆಯಲ್ಲಿಎಸ್. ಎನ್. ಸಿ. ಯ ಎಂಜಿನಿಯರ್ ಸುಶಾಂತ್, ಸಹಾಯಕ ಸಿಬ್ಬಂದಿಗಳಾದ ಸುಕೇಶ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಅಧ್ಯಕ್ಷತೆ ವಹಿಸಿ, ಕಲಿಕಾ ಸಾಮಗ್ರಿ ವಿತರಿಸಿದ ಎಸ್ ಎನ್ ಸಿ ಯವರಿಗೆ ಕೃತಜ್ಞತೆ ಸಲ್ಲಿಸಿ ಸ್ವಾಗತಿಸಿದರು.
ಶಿಕ್ಷಕ ಮಹೇಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ಪಿ. ವಿ.ಆನಂದ ವಂದಿಸಿದರು. ಶಿಕ್ಷಕರಾದ ಶ್ಯಾಮಲಾ, ರಘುಪತಿ ಹೆಬ್ಬಾರ್, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

