ಡಿ.ಎಲ್.ಗೆ ಮೊಬೈಲ್ ನಂಬರ್‌ ಲಿಂಕ್‌ ಮಾಡಲು ರಸ್ತೆ ಸಾರಿಗೆ ಸಚಿವಾಲಯ ಸೂಚನೆ

0
159

ನವದೆಹಲಿ: ದೇಶದ ಎಲ್ಲಾ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ಮಾಲೀಕರು ತಮ್ಮ ಮೊಬೈಲ್ ನಂಬರ್‌ಗಳನ್ನು ಆಧಾರ್ ಮೂಲಕ ಲಿಂಕ್ ಮಾಡಬೇಕು ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ. ಸುಗಮ ಸಂವಹನ ಮತ್ತು ಸಾರಿಗೆ ಸೇವೆಗಳಿಗೆ ಸುಲಭ ಪ್ರವೇಶಕ್ಕಾಗಿ ಆಧಾರ್ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ವಾಹನ ನೋಂದಣಿ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡುವುದು, ಆಧಾರ್‌ನಿಂದ ಪರಿಶೀಲಿಸುವುದು ಕಡ್ಡಾಯ ಅಂತ ಸಚಿವಾಲಯ ತಿಳಿಸಿದೆ. ಯಾವುದೇ ಸಾರಿಗೆ ಅಥವಾ ಡ್ರೈವಿಂಗ್ ಸಂಬಂಧಿ ಸೇವೆಗಳನ್ನು ಪಡೆಯಲು ಇದು ಅಗತ್ಯ.

ವಾಹನ ಮತ್ತು ಸಾರಥಿ ಪೋರ್ಟಲ್‌ಗಳಲ್ಲಿ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಬಹುದು ಅಂತ ಸಚಿವಾಲಯ ತಿಳಿಸಿದೆ. ಮಾಹಿತಿಯನ್ನು ಸರಿಯಾಗಿ ಮತ್ತು ನವೀಕೃತವಾಗಿಡಲು ಇದು ಸಹಾಯಕ. ಆನ್‌ಲೈನ್‌ನಲ್ಲಿ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಲು ವ್ಯವಸ್ಥೆ ಇದೆ. ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ಮಾಲೀಕರಿಗೆ ಮಾಹಿತಿ ಅಪ್‌ಡೇಟ್ ಮಾಡಲು ರಾಜ್ಯ ಸಾರಿಗೆ ಇಲಾಖೆಗಳು ಸಂದೇಶ ಕಳಿಸುತ್ತಿವೆ. 

LEAVE A REPLY

Please enter your comment!
Please enter your name here