ಜ್ಯೂಸ್ ಕುಡಿಯಲು ಕಾರ್ ನಿಲ್ಲಿಸಿದ ಕ್ಷಣದಲ್ಲೇ ದರೋಡೆ : 15.5 ಲಕ್ಷ ನಗದು, 35 ಗ್ರಾಂ ಚಿನ್ನ ಕಳವು

0
433

ಯಾದಗಿರಿ : ನಿಲ್ಲಿಸಿದ್ದ ಕಾರ್ ನಲ್ಲಿದ್ದ ಹಣ, ಚಿನ್ನಾಭರಣವನ್ನು ಕದ್ದು ಕಳ್ಳರು ಪರಾರಿಯಾದ ಘಟನೆ ಯಾದಗಿರಿ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ.

15.5 ಲಕ್ಷ ರೂಪಾಯಿ ಹಣ ಮತ್ತು 35 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ಶರಣಪ್ಪ ಎಂಬುವರಿಗೆ ಸೇರಿದ ಹಣ ಹಾಗೂ ಚಿನ್ನಾಭರಣ ಕಳ್ಳತನವಾಗಿದೆ.ಯಾದಗಿರಿ ತಾಲೂಕಿನ ಸಮೀಪ ಚಕ್ರ ಗ್ರಾಮದ ನಿವಾಸಿ ಶರಣಪ್ಪ ಆಸ್ತಿ ಖರೀದಿಗೆ ಕುಟುಂಬ ಸಮೇತ ಕಾರ್ ನಲ್ಲಿ ಬಂದಿದ್ದರು.

ಅವರು ಕಾರ್ ನಿಲ್ಲಿಸಿ ಜ್ಯೂಸ್ ಕುಡಿಯಲು ಹೋಗಿದ್ದಾಗ ಕಳ್ಳರು ಕೃತ್ಯ ವೆಸಗಿದ್ದಾರೆ. ಕಾರ್ ಹಿಂಬಾಲಿಸಿಕೊಂಡು ಬೈಕ್ ನಲ್ಲಿ ಬಂದಿದ್ದವರಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here