ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ತಾಲೂಕಿನ ಪೆರಿಂಜೆ ಗ್ರಾಮದ ರೋಹಿಣಿ ಅವರ ರೋಶ್ನಿ ಹೋಂ ಪ್ರಾಡಕ್ಟ್ಸ್ ಉತ್ಪನ್ನಗಳ ಮೂಲಕ ರಾಜ್ಯವನ್ನು ದಾಟಿ ರಾಷ್ಟ್ರಮಟ್ಟಕ್ಕೆ ಬೆಳೆದಿರುತ್ತಾರೆ. ಇದರಿಂದಾಗಿ ನವದೆಹಲಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ವ್ಯಾಪಾರ ಉತ್ಸವದಲ್ಲಿ ಅವರು ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿರುತ್ತಾರೆ. ವೋಕಲ್ ಟು ಗ್ಲೋಬಲ್ ಮೂಲಕ ಬೆಳೆದ ಇವರ ಪರಿ ಬಹಳ ಸೂಜಿಗವಾದುದು.
ಅಂತರಾಷ್ಟ್ರೀಯ ಮಟ್ಟದ ಈ ವ್ಯಾಪಾರ ಉತ್ಸವದಲ್ಲಿ ಇಷ್ಟೊಂದು ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶವನ್ನು ಪಡೆದಿರುವುದು ಅವರಿಗೆ ಅತೀವ ಸಂತಸವನ್ನು ಉಂಟುಮಾಡಿದೆ. ಒಂದು ರೀತಿಯಲ್ಲಿ ಇದು ಅವರ ತಯಾರಿಸುವ ಉತ್ಪನ್ನಗಳಲ್ಲಿರುವ ಗುಣಮಟ್ಟ ಹಾಗೂ ಅದರ ಖ್ಯಾತಿಗೆ ಉತ್ತರವಾಗಿದೆ. ಇನ್ನಷ್ಟು ಕೀರ್ತಿ, ಖ್ಯಾತಿ ಅವರಿಗೆ ಲಭಿಸಲಿ ಎಂದು ಹಾರೈಕೆ.

